ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಬಸವ ಧರ್ಮ ಪೀಠದಲ್ಲಿ ಅಪಸ್ವರ, ಟ್ರಸ್ಟ್ ವಿರುದ್ಧ ಸ್ವಾಮೀಜಿ ಗರಂ

ಹುಬ್ಬಳ್ಳಿ : ಬೀದರ್ ಬಸವ ಧರ್ಮ ಪೀಠದಲ್ಲಿ ಸದ್ಯ ಅಪಸ್ವರ ಕೇಳಿ ಬರುತ್ತಿದೆ ಎಂದು ಕುಂಬಳಗೋಡು ಬಸವ ಧರ್ಮ ಪೀಠದ ಚನ್ನಬಸವಾನಂದ ಸ್ವಾಮೀಜಿ ಇದೀಗ, ಬಸವ ಪೀಠದ ಅಧ್ಯಕ್ಷರ ವಿರುದ್ದ ಗಂಭೀರ ಆರೋಪ ಮಾಡುತ್ತಿದ್ದಾರೆ.

ಬೀದರ ಬಸವ ಧರ್ಮ ಪೀಠದ ಮಾತೆ ಗಂಗಾದೇವಿ ಅಧ್ಯಕ್ಷರಾದ ಮೇಲೆ ಪೀಠದಲ್ಲಿ ಎನು ಸರಿ ಇಲ್ಲ. ಕೆಲವು ಸ್ವಾರ್ಥಿಗಳು ಆಸ್ತಿ ಮೇಲೆ ಕಣ್ಣು ಹಾಕಿದ್ದಾರೆ. ಬೀದರ್ ಬಸವರಾಜ್ ಎಂಬುವವರು ಆಸ್ತಿ ಹೊಡೆಯಲು ಸಂಚು ರೂಪಿಸಿದ್ದಾರಂತೆ. ದೇಶದ ಎಲ್ಲ ಭಾಗದಲ್ಲಿ ಬಸವ ಪೀಠದ ಶಾಖೆಗಳಿವೆ. ಅವೆಲ್ಲದಕ್ಕೂ ಮಾತೆ ಗಂಗಾದೇವಿ ಅಧ್ಯಕ್ಷರಾಗಿದ್ದಾರೆ. ಸದ್ಯ ಬಸವ ಪೀಠದ ಎಲ್ಲ ಟ್ರಸ್ಟ್'ಗಳಿಂದ ಚನ್ನಬಸವಾನಂದ ಸ್ವಾಮೀಜಿಯನ್ನು ಉಚ್ಛಾಟನೆ ಮಾಡಿದ್ದರಿಂದ ಸ್ವಾಮೀಜಿ ನೇರ ಪೀಠದ ವಿರುದ್ಧ ಆರೋಪ ಮಾಡುತ್ತಿದ್ದಾರೆ.

ಬಸವ ಕಲ್ಯಾಣದಲ್ಲಿ ಇದೇ ಅ.8 ರಂದು ಕಲ್ಯಾಣ ಪರ್ವ ಇದೆ. ಇದೀಗ ಆಮಂತ್ರಣದಲ್ಲಿ ನಮ್ಮ ಹೆಸರು ಹಾಕಿಲ್ಲ. ಇದೇ 8 ರಿಂದ ನಡೆಯೋ ಕಲ್ಯಾಣ ಪರ್ವ ನಮ್ಮ ಅನುಯಾಯಿಗಳ ಹೆಸರಿಲ್ಲ. ಸಂಧಾನ ಮಾಡಿ ನಮಗೆ ಮೋಸ ಮಾಡಿದ್ದಾರೆ‌. ಇದೀಗ ನಾವು ಪರ್ಯಾಯ ಕಲ್ಯಾಣ ಪರ್ವ ಮಾಡಲು ನಿರ್ಧರಿಸಿದ್ದೇವೆ. ನಮ್ಮನ್ನ ದೂರ ಇಡಲು ಬಸವ ಪೀಠದ ಅದ್ಯಕ್ಷರಾದ ಮಾತೆ ಗಂಗಾದೇವಿ ಕಾರಣ ಅನ್ನೋದು ಚನ್ನಬಸವಾನಂದ ಸ್ವಾಮೀಜಿ ಆರೋಪ ಮಾಡುತ್ತಿದ್ದಾರೆ.

Edited By : Shivu K
Kshetra Samachara

Kshetra Samachara

07/10/2022 01:36 pm

Cinque Terre

44.36 K

Cinque Terre

0

ಸಂಬಂಧಿತ ಸುದ್ದಿ