ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಗಣೇಶ ಚತುರ್ಥಿಗೆ ಕಟ್ಟುನಿಟ್ಟಿನ ಕ್ರಮ, ಶಾಂತಿ ಸಭೆಯಲ್ಲಿ ಸೂಚನೆ

ನವಲಗುಂದ : ಗಣೇಶ ಚತುರ್ಥಿ ಹಿನ್ನೆಲೆ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಶುಕ್ರವಾರ ಸಂಜೆ ನವಲಗುಂದ ಪಟ್ಟಣದ ತಾಲೂಕಾ ಪಂಚಾಯತ್ ಸಭಾ ಭವನದಲ್ಲಿ ಪೊಲೀಸ್ ಇಲಾಖೆ ಹಾಗೂ ತಾಲೂಕಾ ಆಡಳಿತದ ವತಿಯಿಂದ ಶಾಂತಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.

ತಾಲೂಕಾ ದಂಡಾಧಿಕಾರಿಗಳಾದ ಅನೀಲ ಬಡಿಗೇರ, ಸಿಪಿಐ ಧೃವರಾಜ ಬಿ ಪಾಟೀಲ ಹಾಗೂ ಪಿಎಸ್ಐ ನವೀನ ಜಕ್ಕಲಿ ಅವರ ನೇತೃತ್ವದಲ್ಲಿ ನಡೆದ ಶಾಂತಿ ಸಭೆಯಲ್ಲಿ ಗಣೇಶ ಹಬ್ಬದಲ್ಲಿ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತೆ ಎಂಬುದರ ಸಮಗ್ರ ಮಾಹಿತಿಯನ್ನು ನೀಡಿದರು.

ಪ್ರಮುಖವಾಗಿ ಪರಿಸರ ಸ್ನೇಹಿ ಗಣಪತಿ ಪ್ರತಿಷ್ಠಾಪನೆ ಹಾಗೂ ಹಸಿರು ಪಟಾಕಿ ಬಳಸತಕ್ಕದ್ದು. ಕಡ್ಡಾಯವಾಗಿ ಪರವಾನಿಗಿ ಪಡೆದುಕೊಳ್ಳಬೇಕು. ಮೆರವಣಿಗೆ ಸಂದರ್ಭದಲ್ಲಿ ಡಿಜೆ ಬಳಸುವಂತಿಲ್ಲ. ಸಾರ್ವಜನಿಕ ಸಂಚಾರ ಹಾಗೂ ವಾಹನ ಸಂಚಾರಕ್ಕೆ ಅಡೆತಡೆ ಉಂಟಾಗದಂತೆ ಪೆಂಡಾಲ್ ಹಾಕಬೇಕು.

ಗಣಪತಿ ಪೆಂಡಾಲ್‌ಗಳಲ್ಲಿ ಇಬ್ಬರು ಸ್ವಯಂ ಸೇವಕರು ಇರಲೇ ಬೇಕು. ಕುಡಿಯುವ ನೀರಿನಲ್ಲಿ ಗಣಪತಿ ವಿಸರ್ಜನೆ ಮಾಡಕೂಡದು.

ಪೆಂಡಾಲ್‌ಗಳಲ್ಲಿ ಜೂಜಾಟ್ ಆಡುವಂತಿಲ್ಲ ಘಟನೆ ನಡೆದದ್ದೇ ಆದಲ್ಲಿ ಆಯೋಜಕರೇ ಹೊಣೆಗಾರರು. ಹಾಗೂ ಸೌಹಾರ್ದತೆಯಿಂದ ಹಬ್ಬ ಆಚರಿಸಬೇಕು ಎಂಬ ಹಲವು ನಿಯಮಗಳ ಪ್ರಕಾರ ಆಚರಿಸಬೇಕು ಎಂದು ತಿಳಿಸಲಾಯಿತು. ಈ ಸಂದರ್ಭದಲ್ಲಿ ಹಿರಿಯರು, ಯುವಕರು ಪಾಲ್ಗೊಂಡಿದ್ದರು.

Edited By :
Kshetra Samachara

Kshetra Samachara

27/08/2022 08:22 am

Cinque Terre

52.25 K

Cinque Terre

0

ಸಂಬಂಧಿತ ಸುದ್ದಿ