ಧಾರವಾಡ: ಹೃದಯದ ಶಸ್ತ್ರ ಚಿಕಿತ್ಸೆ ವಿಫಲವಾಗಿ ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿರುವ ಧಾರವಾಡ ಹೊಸಯಲ್ಲಾಪುರದ ಒಂದೂವರೆ ವರ್ಷದ ಪುಟ್ಟ ಕಂದ ಇರ್ಫಾನ್ ದರವಾನ ಎಂಬಾತನ ಕುರಿತು ನಿಮ್ಮ ಪಬ್ಲಿಕ್ ನೆಕ್ಸ್ಟ್ ಬಿತ್ತರಿಸಿದ್ದ ವರದಿಗೆ ಸಾಕಷ್ಟು ಹೃದಯಗಳು ಮಿಡಿದು ಆ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಿವೆ. ಅದರಲ್ಲೂ ಗದಗಿನಿಂದ ಬಂದ ಆಟೊ ಚಾಲಕರು ಮತ್ತು ಮಾಲೀಕರು ಇರ್ಫಾನ್ ತಂದೆ ಅಸ್ಲಾಂ ಅವರಿಗೆ 11 ಸಾವಿರ ರೂಪಾಯಿ ಧನ ಸಹಾಯ ಮಾಡಿದ್ದಾರೆ.
ಪಬ್ಲಿಕ್ ನೆಕ್ಸ್ಟ್ ವರದಿ ನೋಡಿದ್ದ ಗದಗಿನ ಆಟೊ ಚಾಲಕರು ಮತ್ತು ಮಾಲೀಕರು ತಾವೇ ಸ್ವತಃ ದೇಣಿಗೆ ಸಂಗ್ರಹಿಸಿ ಅಲ್ಲದೇ ಮುಳಗುಂದ ನಾಕಾ ಬಳಿಯ ಸಾರ್ವಜನಿಕರಿಂದ ಕೈಲಾದಷ್ಟು ದೇಣಿಗೆ ಸಂಗ್ರಹಿಸಿದ್ದರು. ಹೀಗೆ ದೇಣಿಗೆ ಸಂಗ್ರಹಿಸಿದ ಹಣವನ್ನು ತಾವೇ ಧಾರವಾಡಕ್ಕೆ ಬಂದು ಅಸ್ಲಾಂ ಅವರಿಗೆ ನೀಡಿದ್ದಾರೆ.
ಇವರಲ್ಲದೇ ಪಬ್ಲಿಕ್ ನೆಕ್ಸ್ಟ್‌ನಲ್ಲಿ ಬಂದ ವರದಿ ನೋಡಿ ಅನೇಕ ದಾನಿಗಳು ತಮ್ಮ ಕೈಲಾದಷ್ಟು ಹಣವನ್ನು ಅವರ ಬ್ಯಾಂಕ್ ಖಾತೆ ಹಾಗೂ ಫೋನ್ ಪೇ, ಗೂಗಲ್ ಪೇ ನಂಬರ್‌ಗೆ ಹಾಕಿದ್ದು, ಇಲ್ಲಿಯವರೆಗೂ ಅವರ ಬ್ಯಾಂಕ್ ಖಾತೆಗೆ ಒಟ್ಟು 29 ಸಾವಿರ ಹಣ ಜಮೆಯಾಗಿದೆ.
ಸದ್ಯ ಇರ್ಫಾನ್‌ನ್ನು ಉಳಿಸಿಕೊಳ್ಳಲು ಅವನ ಪೋಷಕರು ಒದ್ದಾಡುತ್ತಿದ್ದು, ಈ ಕುಟುಂಬಕ್ಕೆ ಇನ್ನೂ ಆರ್ಥಿಕ ನೆರವು ಬೇಕಾಗಿದೆ. ಈ ಕುಟುಂಬಕ್ಕೆ ಸಹಾಯ ಮಾಡಬೇಕು ಎನ್ನುವ ದಾನಿಗಳು 9019636745 ಈ ಫೋನ್ ಪೇ, ಗೂಗಲ್ ಪೇ ನಂಬರ್‌ಗೆ ಹಣ ಸಂದಾಯ ಮಾಡಿ ಮಗುವಿಗೆ ಸಹಾಯ ಮಾಡಬಹುದು. ಇಲ್ಲಿಯವರೆಗೆ ಅವರಿಗೆ ಆರ್ಥಿಕ ಸಹಾಯ ಮಾಡಿದ ಎಲ್ಲ ದಾನಿಗಳಿಗೆ ಪಬ್ಲಿಕ್ ನೆಕ್ಸ್ಟ್ ಕಡೆಯಿಂದ ಹೃದಯಪೂರ್ವಕ ಧನ್ಯವಾದಗಳು.
Kshetra Samachara
20/08/2022 11:13 am