ಕುಂದಗೋಳ : ರಾಜ್ಯದಲ್ಲಿ ಅತಿವೃಷ್ಟಿ ಹೆಚ್ಚಾಗಿದೆ, ರೈತಾಪಿ ಜನರ ಬೆಳೆ ಸಂಪೂರ್ಣ ನಾಶವಾಗಿ ಜನ ಪರಿಹಾರಕ್ಕೆ ಅಂಗಲಾಚಿರುವ ಸಂದರ್ಭದಲ್ಲೀ ರಾಜ್ಯ ಬಿಜೆಪಿ ಸರ್ಕಾರ ತನ್ನ ವೈಫಲ್ಯ ಮುಚ್ಚಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆದಿದೆ ಎಂದು ಶಾಸಕಿ ಕುಸುಮಾವತಿ ಶಿವಳ್ಳಿ ಹೇಳಿದರು.
ಅವರು ಕುಂದಗೋಳ ತಾಲೂಕಿನಲ್ಲಿ ಇಂದು ಗಾಳಿಮರೇಮ್ಮದೇವಿ ದೇವಸ್ಥಾನದಿಂದ ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆದಿದ್ದನ್ನು ಖಂಡಿಸಿ ಕೈಗೊಂಡ ಬೃಹತ್ ಪ್ರತಿಭಟನಾ ಮೆರವಣಿಗೆ ನೇತೃತ್ವವಹಿಸಿ ಮಾತನಾಡಿ ನಾಳೆ ಸಿದ್ದರಾಮಯ್ಯ ರಾಜ್ಯದಿಂದ ರಾಷ್ಟ್ರ ಮಟ್ಟಕ್ಕೆ ಕಾಲಿಡುತ್ತಿರುವ ನಾಯಕ ಅವರ ಬೆಳವಣಿಗೆ ಕಂಡು ಮುಂದೆ ಎಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರುತ್ತೆ ಎಂಬ ಭಯದಲ್ಲಿ ಇಂತಹ ಅಹಿತಕರ ಘಟನೆ ನಡೆಸುತ್ತಿದ್ದಾರೆ ಎಂದರು.
ಗಾಳಿಮರೇಮ್ಮದೇವಿ ದೇವಸ್ಥಾನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ತಹಶೀಲ್ದಾರ್ ಕಚೇರಿ ತಲುಪಿ ತಹಶೀಲ್ದಾರ್ ಅಶೋಕ್ ಶಿಗ್ಗಾಂವಿ ಅವರಿಗೆ ಶಾಸಕರ ನೇತೃತ್ವದಲ್ಲಿ ಮೊಟ್ಟೆ ಎಸೆದವರ ವಿರುದ್ಧ ಕ್ರಮಕ್ಕೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಎಲ್ಲಾ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
Kshetra Samachara
23/08/2022 02:57 pm