ಕುಂದಗೋಳ : ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ರಾತ್ರೋರಾತ್ರಿ ನುಗ್ಗಿದ ಕಳ್ಳರು ಆಫೀಸ್ ಬಾಗಿಲು ಒಡೆದು ಕಂಪ್ಯೂಟರ್ ಮತ್ತು ನಗದು ಹಣ ದೋಚಿ ಪರಾರಿಯಾದ ಘಟನೆ ಭಾನುವಾರ ನಡೆದಿದ್ದು ವಿಷಯ ತಡವಾಗಿ ಬೆಳಕಿಗೆ ಬಂದಿದೆ.
ಹೌದು ! ಭಾನುವಾರ ರಾತ್ರಿ ಕುಂದಗೋಳ ಪಟ್ಟಣದ ಮಾನಪ್ಪನ ಫ್ಲಾಟ್'ನಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ನುಗ್ಗಿದ ಕಳ್ಳರು ಎರಡು ಕಂಪ್ಯೂಟರ್, ಒಂದು ಯುಪಿಎಸ್, ಎರಡು ವಾಲಿಬಾಲ್, ಒಂದು ಶೆಟಲ್ ಕಾಕ್, ಒಂದು ಮೊಬೈಲ್ ಚಾರ್ಜರ್ ಸೇರಿ ಪ್ರಾಚಾರ್ಯರ ಟೇಬಲ್ ಡ್ರಾ ಒಳಗಿದ್ದ ವಿದ್ಯಾರ್ಥಿಗಳ ಕಾಲೇಜು ಫೀಸ್ 11 ಸಾವಿರ ರೂಪಾಯಿ ಹಣ ದೋಚಿ ಪರಾರಿಯಾಗಿದ್ದಾರೆ.
ಸೋಮವಾರ ಬೆಳಗ್ಗೆ ಎಂದಿನಂತೆ ಕರ್ತವ್ಯಕ್ಕೆ ಬಂದ ಕಾಲೇಜು ಸಿಬ್ಬಂದಿ ಬಾಗಿಲು ಒಡೆದದ್ದನ್ನು ನೋಡಿದಾಗಲೇ ವಿಷಯ ಗೊತ್ತಾಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಇನ್ನು ಕಾಲೇಜು ಕಟ್ಟಡಕ್ಕೆ ಹೊಂದಿಕೊಂಡು ನೂರಾರು ಮನೆಗಳಿದ್ದು ಕಳ್ಳತನದಿಂದ ಎಲ್ಲರೂ ಆತಂಕ ಪಡುವ ಸ್ಥಿತಿ ನಿರ್ಮಾಣವಾಗಿದೆ.
ಸದ್ಯ ಪಿಯು ಕಾಲೇಜಿನಲ್ಲಿ ಸಿಸಿ ಕ್ಯಾಮೆರಾ ಇಲ್ಲದೇ ಇರುವ ಕಾರಣ ಕಳ್ಳರು ತಮ್ಮ ವರಸೆ ತೋರಿಸಿ ಫಿಂಗರ್ ಪ್ರಿಂಟ್ ಸಹ ಸಿಗದಂತೆ ಕಳ್ಳತನ ಮಾಡಿ ನೀರು ಹಾಕಿ ಸ್ಥಳ ತೊಳೆದು ಹೋಗಿದ್ದಾರೆ. ಒಟ್ಟಾರೆ ಸರಸ್ವತಿ ಆಲಯಕ್ಕೆ ಕನ್ನ ಹಾಕಿದ ಚಾಲಾಕಿ ಕಳ್ಳರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ
Kshetra Samachara
02/08/2022 07:39 pm