ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲಕ್ಷ್ಮೇಶ್ವರದಲ್ಲಿ ವೀಕೆಂಡ್ ಕರ್ಫ್ಯೂಗೆ ಕ್ಯಾರೆ ಎನ್ನದ ಜನ: ಪೊಲೀಸರ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿ...!

ಗದಗ: ಕೊರೋನಾ ಮೂರನೇ ಅಲೆ ಅಬ್ಬರ ಜೋರಾಗುತ್ತಿದ್ದಂತೆಯೇ ರಾಜ್ಯ ಸರಕಾರ ಶನಿವಾರ ಹಾಗೂ ಭಾನುವಾರ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದ್ದು ಮೊದಲ ಶನಿವಾರವೇ ಲಕ್ಷ್ಮೇಶ್ವರದಲ್ಲಿ ಜನರು ಬೇಜವಾಬ್ದಾರಿ ತನ ತೋರುತ್ತಿದ್ದಾರೆ. ಅಲ್ಲದೇ ಎಲ್ಲೆಂದರಲ್ಲಿ ಬೇಕಾಬಿಟ್ಟಿಯಾಗಿ ಸಾರ್ವಜನಿಕರ ಓಡಾಟ ಮಾಡುತ್ತಿದ್ದಾರೆ.

ಹೌದು..ಲಕ್ಷ್ಮೇಶ್ವರ ಪಟ್ಟಣದ ಶಿಗ್ಲಿ ಕ್ರಾಸ್ ಪಾದಗಟ್ಟಿ ಪಂಪ ಸರ್ಕಲ್ ಸೇರಿದಂತೆ ಇನ್ನೂ ಅನೇಕ ಕಡೆಗಳಲ್ಲಿ ಸಾರ್ವಜನಿಕರ ಓಡಾಟ ಜೋರಾಗಿದೆ. ಅಲ್ಲದೇ ಪೊಲೀಸರು ಕೂಡ ಯಾರಿಗೂ ಏನು ಹೇಳುತ್ತಿಲ್ಲ ವಿನಾಕಾರಣ ಜನರ ಓಡಾಟ ಜೋರಾಗಿದೆ.

ಇನ್ನೂ ವೀಕೆಂಡ್ ಕರ್ಫ್ಯೂ ಹಿನ್ನಲೆಯಲ್ಲಿ ಬೆಳ್ಳಂಬೆಳಗ್ಗೆ ಪೊಲೀಸರು ಫೀಲ್ಡಿಗಿಳಿದು ವಾಹನ ತಪಾಸಣೆ ಮಾಡುತ್ತಿದ್ದಾರೆ. ಲಕ್ಷ್ಮೇಶ್ವರದ ಶಿಗ್ಲಿ ಕ್ರಾಸ್ ಪಾದಗಟ್ಟಿ,ಬಜಾರ್ ರೋಡ್, ಹುಬ್ಬಳ್ಳಿ ರಸ್ತೆ ಸೇರಿದಂತೆ ಇನ್ನೂ ಅನೇಕ ಕಡೆಗಳಲ್ಲಿ ಪೊಲೀಸರಿಂದ ವಾಹನ ತಪಾಸಣೆ ಆರಂಭವಾಗಿದೆ ಕರ್ಫ್ಯೂ ಜಾರಿಯಲ್ಲಿದ್ದರೂ ಜನರು ಓಡಾಡುತ್ತಿದ್ದಾರೆ ಸುಖಾಸುಮ್ಮನೆ ಓಡಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಪೊಲೀಸರು ಸಜ್ಜಾಗಿದ್ದಾರೆ. ಆದರೆ ಬಹುತೇಕ ಕಡೆಗಳಲ್ಲಿ ಪೊಲೀಸರ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.

Edited By : Shivu K
Kshetra Samachara

Kshetra Samachara

08/01/2022 07:50 pm

Cinque Terre

74.13 K

Cinque Terre

2

ಸಂಬಂಧಿತ ಸುದ್ದಿ