ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕುಡುಕರ ಅಡ್ಡೆಯಾದ ಕುಸುಗಲ್ ಪಕ್ಕದ ಬೈಪಾಸ್ ರಸ್ತೆ

ಹುಬ್ಬಳ್ಳಿ- ಹೊಸದಾಗಿ ನಿರ್ಮಾಣವಾಗುತ್ತಿರುವ ಬೈಪಾಸ್ ರಸ್ತೆಯನ್ನು ಕುಡುಕರು ತಮ್ಮ ಅಡ್ಡೆಯನ್ನಾಗಿ ಮಾಡಿಕೊಂಡಿದ್ದು ರೈತರು ಹಾಗೂ ಸಾರ್ವಜನಿಕರು ಕಂಗಾಲಾಗುವಂತೆ ಮಾಡಿದೆ.

ಹೌದು, ಕುಸುಗಲ್ ಬಳಿ ಇರುವ ಬೈಪಾಸ್ ರಸ್ತೆಯಲ್ಲಿ ಕುಡಕರು ಹಾವಳಿ ಹೆಚ್ಚಾಗಿದ್ದು, ಇಲ್ಲಿ ಸಾಯಂಕಾಲ ಆದರೆ ಸಾಕು ಗುಂಪು ಗುಂಪಾಗಿ ಕುಡುಕರ ತಂಡ ಬಂದು, ಮದ್ಯ ಸೇವನೆ ಮಾಡಿ, ಬಾಟಲ್ ಗಳನ್ನು ರಸ್ತೆ ಮೇಲೆ ಒಡೆದು ಹೋಗುತ್ತಿದ್ದಾರೆ. ಅಷ್ಟೇ ಅಲ್ಲದೆ ಇಲ್ಲಿ ಬೈಕ್ ಸ್ಟಂಟ್ ಮಾಡುವ ಪುಡಾರಿಗಳ ಹಾವಳಿ ಜಾಸ್ತಿಯಾಗಿದೆ. ಇವರಿಂದ ಸಾರ್ವಜನಿಕರಿಗೆ ಕಿರಿ‌ಕಿರಿ ಉಂಟಾಗುತ್ತಿದೆ. ಇಷ್ಟೆಲ್ಲಾ ಕಣ್ಣ ಮುಂದೆ ನಡೆಯುತ್ತಿದ್ದರೂ ಕೂಡಾ, ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು, ಇತ್ತ ಗಮನ ಹರಿಸಿ ಸಮಸ್ಯೆ ಬಗೆಹರಿಸುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

31/10/2020 06:52 pm

Cinque Terre

30.09 K

Cinque Terre

2

ಸಂಬಂಧಿತ ಸುದ್ದಿ