ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಇಂದಿನಿಂದ ಹೆಬಸೂರ ಭವನದಲ್ಲಿ ಕೌಶಲ್ಯ-2022 ಬೃಹತ್ ವಸ್ತು ಪ್ರದರ್ಶನ

ಹುಬ್ಬಳ್ಳಿ: ಪಬ್ಲಿಕ್ ನೆಕ್ಸ್ಟ್ ಮಾಧ್ಯಮ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಟೈ ಹುಬ್ಬಳ್ಳಿ ವತಿಯಿಂದ ನಗರದ ಗೋಕುಲ್ ರಸ್ತೆಯಲ್ಲಿರುವ ಹೆಬಸೂರ ಭವನದಲ್ಲಿ ಕೌಶಲ್ಯ-2022 ಬೃಹತ್ ವಸ್ತು ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. ಉದ್ಘಾಟನಾ ಕಾರ್ಯಕ್ರಮವನ್ನು ಜಾಯಿಂಟ್ ಡಿಸ್ಟ್ರಿಕ್ಟ್ ಇಂಡಸ್ಟ್ರಿಯಸ್ ಸೆಂಟರ್ ಡೈರೆಕ್ಟರ್ ಟಿ ಸಿದ್ದಣ್ಣ, ಮತ್ತು ನಾಯಕ ಆ್ಯಂಡ್ ಕಂಪನಿ, ಧಾರವಾಡ ಎಂ.ಡಿ.ಮಿಸ್ ಕಲ್ಪನಾ ನಾಯಕ ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿದರು.

ಟೈ ಹುಬ್ಬಳ್ಳಿಯ ಮಹಿಳಾ ವಿಭಾಗವು ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸಲು ಹಾಗೂ ಮುಂಬರುವ ಹಬ್ಬದ ಋತುವಿನಲ್ಲಿ ಶಾಪಿಂಗ್ ಅನುಭವ ಸೃಷ್ಟಿಸಲು ಇಂದು ಮತ್ತು ನಾಳೆ ಮಹಿಳಾ ಕೌಶಲ್ಯದ ದೂರದೃಷ್ಟಿಯಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ಇದಕ್ಕೆ ಮಾಧ್ಯಮ ಬೆಂಬಲವಾಗಿ ನಿಮ್ಮ ಪಬ್ಲಿಕ್ ನೆಕ್ಸ್ಟ್ ಕೈ ಜೋಡಿಸಿದೆ.

ಈ ಸಂದರ್ಭದಲ್ಲಿ ಟೈ ಮಹಿಳಾ ಪ್ರೆಸಿಡೆಂಟ್ ಶ್ರಾವಣಿ ಪವಾರ, ಟೈ ನಿಯೋಜಕರಾದ ಶಿಲ್ಪಾ ಶೆಟ್ಟಿ, ಸಹಾಯಕ ನಿಯೋಜಕರಾದ ಶೃತಿ ಹೆಬಸೂರ ಸೇರಿದಂತೆ ಹಲವರು ಉಪಸ್ಥಿತರಿದ್ರು.

Edited By : Somashekar
Kshetra Samachara

Kshetra Samachara

16/09/2022 01:52 pm

Cinque Terre

33.9 K

Cinque Terre

0

ಸಂಬಂಧಿತ ಸುದ್ದಿ