ಹುಬ್ಬಳ್ಳಿ: ಸಾಕಷ್ಟು ಸಮಸ್ಯೆಗಳ ನಡುವೆಯೂ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ ಸಾರಿಗೆ ನೌಕರರು ಮತ್ತೆ ಬೀದಿಗಿಳಿಯಲು ಸಜ್ಜಾಗಿದ್ದಾರೆ. ವೇತನ ಪರಿಷ್ಕರಣೆಗಾಗಿ ಹೋರಾಟಕ್ಕೆ ಮುಂದಾಗಿದ್ದು, ಅ. 19ರಂದು ಸಿಎಂ ಗೃಹಕಚೇರಿ ಎದುರು ಹೋರಾಟ ಮಾಡಲು ತೀರ್ಮಾನ ತೆಗೆದುಕೊಂಡಿದ್ದಾರೆ.
ಹೌದು... ಬೆಂಗಳೂರಿನಲ್ಲಿರುವ ಸಿಎಂ ಮನೆ ಎದುರು ಪ್ರತಿಭಟಿಸಲು ನಿರ್ಧಾರ ಮಾಡಿದ್ದು, ನಾಲ್ಕು ಸಾರಿಗೆ ನಿಗಮಗಳಿಂದ ಒಂದು ಸಾವಿರ ನೌಕರರು ಹೋರಾಟ ಮಾಡಲು ಮುಂದಾಗಿದ್ದಾರೆ. ಈ ಕುರಿತು ಹುಬ್ಬಳ್ಳಿಯಲ್ಲಿ ಹನುಮಂತಪ್ಪ ಇಟಗಿ ಹೇಳಿಕೆ ನೀಡಿದ್ದು, ಸರ್ಕಾರಿ ನೌಕರರಿಗೆ ಸರಿ ಸಮಾನವಾದ ವೇತನ ನೀಡಬೇಕು ಈ ನಿಟ್ಟಿನಲ್ಲಿ ಹೋರಾಟಕ್ಕೆ ಮುನ್ನುಡಿ ಬರೆಯಲಿದ್ದಾರೆ.
ಇನ್ನು, ನಿವೃತ್ತ ನೌಕರರ ಬಾಕಿ ಹಣ ಬಿಡುಗಡೆಯಾಗಬೇಕು. ವಜಾಗೊಂಡ ನೌಕರರು ಮರುನೇಮಕಕ್ಕೆ ಆಗ್ರಹಿಸಿದ್ದು, ಸಾರಿಗೆ ನೌಕರರ ವಿವಿಧ ಬೇಡಿಕೆಗಳನ್ನು ತಕ್ಷಣ ಈಡೇರಿಸಬೇಕೆಂದು ಸಿಎಂಗೆ ಮನವಿ ನೀಡುವ ಮೂಲಕ ಹೋರಾಟ ನಡೆಸಲಿದ್ದಾರೆ.
Kshetra Samachara
10/10/2022 05:21 pm