ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಜನರ ಜೀವನ ನೀರು ಪಾಲು ಸಚಿವ್ರೇ ಶಾಶ್ವತ ಪರಿಹಾರ ಎನುಂಟು ?

ನವಲಗುಂದ : ಪ್ರತಿ ವರ್ಷ ಮನೆಗಳಿಗೆ ನೀರು ನುಗ್ಗಿದೆ, ಜಮೀನುಗಳಿಗೆ ನುಗ್ಗಿದೆ ಎನ್ನುವ ಸುದ್ದಿ ಬಿತ್ತರಿಸಲಾಗುತ್ತಲೇ ಇರುತ್ತೆ, ಇದಕ್ಕೆ ಜನಪ್ರತಿನಿದಿನಗಳು ಸ್ಥಳಕ್ಕೆ ಭೇಟಿ ನೀಡೋದೇನು, ಪರಿಶೀಲನೆ ನಡೆಸೋದೇನು, ಹೊಸತಲ್ಲಾ !

ಅಬ್ಬಾ.... ಇದನ್ನೆಲ್ಲಾ ಬಿಟ್ಟು ಸಮಸ್ಯೆಗೆ ಶಾಶ್ವತ ಪರಿಹಾರ ನೀಡೋಕೆ ಮಾತ್ರ ಶಾಸಕರು ಮುಂದಾಗಿಲ್ಲಾ ಅನ್ನೋದೆ ಬೇಜಾರು.

ಹೌದು ! ನವಲಗುಂದ ತಾಲೂಕಿನ ಕಾಲವಾಡ ಗ್ರಾಮ ಇದು, ಪ್ರತಿ ವರ್ಷ ಇಲ್ಲಿನ ಜನರು ಮನೆಗಳಿಗೆ ನುಗ್ಗಿದ ನೀರನ್ನು ಹೊರ ಹಾಕಲೇ ಬೇಕು. ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಿಲ್ಲವಾದ್ದರಿಂದ, ಇಲ್ಲಿನ ಸ್ಥಳೀಯ ಜನಪ್ರತಿನಿದಿನಗಳು ಮಾತ್ರ ಆರಾಮಾಗಿ ಜೀವನ ನಡೆಸುತ್ತಿದ್ದಾರೆ. ಯಾಕಂದ್ರೆ ಅವರ ಮನೆಗಳಿಗೆ ನೀರು ನುಗ್ಗೋದಿಲ್ವಲ್ಲಾ ಎಂಬ ಆಕ್ರೋಶ ಜನರಿಂದ ವ್ಯಕ್ತವಾಗುತ್ತಿದೆ.

ಗುರುವಾರ ಸುರಿದ ಭಾರಿ ಮಳೆಗೆ ಕಾಲವಾಡ ಗ್ರಾಮದ ಮೇಟಿಯವರ ಓಣಿಯಲ್ಲಿ ಇಡೀ ರಾತ್ರಿ ಜನರು ಮನೆಗೆ ನುಗ್ಗಿದ ನೀರನ್ನು ಹೊರ ಹಾಕಲು ಪರದಾಟ ನಡೆಸುವಂತಾಗಿತ್ತು. ಈ ವೇಳೆ ಪಂಪ್ ಸೆಟ್ ಗಳ ಮೂಲಕ ನೀರನ್ನು ಹೊರ ಹಾಕಿದ ಗ್ರಾಮಸ್ಥರು, ಜನಪ್ರತಿನಿದಿನಗಳಿಗೆ ಹಿಡಿ ಶಾಪ ಹಾಕುವಂತಾಗಿತ್ತು.

ಈ ಬಗ್ಗೆ ಗ್ರಾಮ ಪಂಚಾಯತಿ ನೀರು ಹೊರ ಹೋಗಲು ಮಾರ್ಗ ನಿರ್ಮಾಣ ಮಾಡಿದ್ದರೂ ಸಹ ಅದರಿಂದ ಏನು ಪ್ರಯೋಜನ ಆಗಿಲ್ಲವಂತೆ, ಮನೆಗಳಿಗೆ ನುಗ್ಗುವ ನೀರಿನಿಂದ ಕೂಡಿಟ್ಟ ಧವಸ ಧಾನ್ಯಗಳು ಸಹ ಸಂಪೂರ್ಣ ನೀರು ಪಾಲಾಗುತ್ತಿದ್ದೂ, ತಾಲೂಕಾಡಳಿತ ಹಾಗೂ ಈ ಭಾಗದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಅವರು ಪರಿಹಾರಕ್ಕೆ ಮುಂದಾಗಬೇಕಿದೆ.

ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ

Edited By : Nagesh Gaonkar
Kshetra Samachara

Kshetra Samachara

07/10/2022 07:33 pm

Cinque Terre

84.34 K

Cinque Terre

3

ಸಂಬಂಧಿತ ಸುದ್ದಿ