ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಸಿ ನೆಡುವ ಮೂಲಕ ಮನ್ ಕಿ ಬಾತ್ ಕಾರ್ಯಕ್ರಮ.ಯಶಸ್ವಿಗೊಳಿಸಿದ ಗ್ರಾಮಸ್ಥರು

ಅಳ್ನಾವರ: ಪ್ರದಾನ ಮಂತ್ರಿ ನರೇಂದ್ರ ಮೋದಿ ಅವರ ಸ್ಫೂರ್ತಿಯುತ (ಮನ್ ಕಿ ಬಾತ್) ಮನದ ಮಾತುಗಳನ್ನು ಧಾರವಾಡ ಗ್ರಾಮಾಂತರ ಜಿಲ್ಲಾ ಅಳ್ನಾವರ ಯುವ ಮೋರ್ಚಾ ತಂಡದಿಂದ ಅಳ್ನಾವರ ತಾಲೂಕಿನ ಕುಂಬಾರಕೊಪ್ಪ ಗ್ರಾಮದ ಶ್ರೀ ಸಿದ್ದಾರೂಢರ ಮಠದ ಆವರಣದಲ್ಲಿ ಸಸಿ ನೆಡುವುದರ ಮೂಲಕ ಯಶಸ್ವಿಯಾಗಿ ಆಚರಿಸಲಾಯಿತು.

ಅದರ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನದ ಪ್ರಯುಕ್ತ "ದಿವಗಂತ ಪಂಡಿತ ದೀನ್ ದಯಾಳ್ ಉಪಾಧ್ಯಯ"ರ ಹುಟ್ಟು ಹಬ್ಬವನ್ನು ಸಹ ಆಚರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಕುಂಬಾರಕೊಪ್ಪ ಗ್ರಾಮದ ಹಿರಿಯರು,ಯುವಕರು, ಭಾರತೀಯ ಜನತಾ ಪಕ್ಷದ ಎಲ್ಲ ಪದಾಧಿಕಾರಿಗಳು ಜೊತೆಗೆ ಮಹೇಶ ಬುಡರಕಟ್ಟಿ,ವಕೀಲರಾದ ಸೋಮಶೇಖರ ಹೂಗಾರ್, ಸರ್ವರು ಪತ್ರದ ಮುಖಾಂತರ ಮೋದಿ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರಲು ಅಪೇಕ್ಷೆ ಪಟ್ಟರು.

Edited By : PublicNext Desk
Kshetra Samachara

Kshetra Samachara

25/09/2022 07:38 pm

Cinque Terre

23.38 K

Cinque Terre

0

ಸಂಬಂಧಿತ ಸುದ್ದಿ