ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕಳಪೆ ಕಾಮಗಾರಿ; ಸೇತುವೆ ಅರೆಜೀವ, ಜನತೆ ಆತಂಕ!

ಧಾರವಾಡ: 2020ರಲ್ಲಿ ಉಂಟಾದ ಭೀಕರ ಪ್ರವಾಹದ ವೇಳೆ ಕೊಚ್ಚಿಕೊಂಡು ಹೋಗಿದ್ದ ಧಾರವಾಡ ತಾಲೂಕಿನ ಹಾರೋಬೆಳವಡಿ ಹಾಗೂ ಸವದತ್ತಿ ತಾಲೂಕಿನ ಇನಾಂಹೊಂಗಲ ಮಧ್ಯದ ಸೇತುವೆ ಮರು ನಿರ್ಮಾಣವಾಗಿ ಎರಡ್ಮೂರು ವರ್ಷ ಕಳೆದಿದೆ. ಸುಸಜ್ಜಿತವಾಗಿ ನಿರ್ಮಾಣವಾಗಬೇಕಾಗಿದ್ದ ಸೇತುವೆ ರಸ್ತೆ ಈಗಾಗಲೇ ಹದಗೆಟ್ಟಿದ್ದು, ಸಾರ್ವಜನಿಕರು ಹಿಡಿಶಾಪ ಹಾಕುವಂತಾಗಿದೆ.

ಭೀಕರ ಪ್ರವಾಹದ ವೇಳೆ ಈ ಸೇತುವೆಯೇ ಕೊಚ್ಚಿಕೊಂಡು ಹೋಗಿತ್ತು. ಇದರಿಂದ ಧಾರವಾಡ, ಸವದತ್ತಿ ರಾಜ್ಯ ಹೆದ್ದಾರಿ ಬಂದ್ ಕೂಡ ಆಗಿತ್ತು. ಇದಾದ ಬಳಿಕ ಪರ್ಯಾಯ ರಸ್ತೆ ವ್ಯವಸ್ಥೆ ಮಾಡಿ, ಸೇತುವೆ ಮರು ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಸೇತುವೆ ಮರು ನಿರ್ಮಾಣವಾದ ಬಳಿಕ ಸೇತುವೆ ಎದುರು ಬದುರಿನ ರಸ್ತೆ ಸುಸಜ್ಜಿತವಾಗುತ್ತದೆ ಎಂದೇ ಊಹಿಸಲಾಗಿತ್ತು. ಆದರೆ, ಸೇತುವೆ ಮರು ನಿರ್ಮಾಣವಾದ ಒಂದೂವರೆ ವರ್ಷದ ನಂತರವೇ ಈಗ ಈ ರಸ್ತೆ ಹದಗೆಟ್ಟಿದೆ. ಕಳಪೆ ಗುಣಮಟ್ಟದ ರಸ್ತೆ ನಿರ್ಮಾಣದಿಂದ ಸಾರ್ವಜನಿಕರು ಹಿಡಿಶಾಪ ಹಾಕುವಂತಾಗಿದೆ.

ಈಗಲೇ ಈ ರಸ್ತೆಯನ್ನು ಮತ್ತೊಂದು ಬಾರಿ ರಿಪೇರಿ ಮಾಡಿಸಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕಿದೆ. ಇದೇ ರೀತಿ ಮತ್ತೊಂದು ಬಾರಿ ಪ್ರವಾಹ ಉಂಟಾಗಿದ್ದೇ ಆದಲ್ಲಿ ಸೇತುವೆ ಮತ್ತೊಂದು ಬಾರಿ ಕೊಚ್ಚಿಕೊಂಡು ಹೋಗುವುದರಲ್ಲಿ ಯಾವುದೇ ಸಂದೇಹವಿಲ್ಲ.

Edited By : Manjunath H D
Kshetra Samachara

Kshetra Samachara

11/09/2022 11:46 am

Cinque Terre

191.84 K

Cinque Terre

7

ಸಂಬಂಧಿತ ಸುದ್ದಿ