ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮೂಲಭೂತ ಸೌಕರ್ಯ ವಂಚಿತ ಶಿಳ್ಯೆಕೇತರ ಸಮುದಾಯ; ಚಿತ್ತ ಹರಿಸದ ಆಡಳಿತ ವಲಯ

ಹುಬ್ಬಳ್ಳಿ: ಅವರೆಲ್ಲ ಅಂದೇ ದುಡಿದು, ಅಂದೇ ಉಣ್ಣುವ ಬಡಕುಟುಂಬಗಳು. ತುತ್ತಿನ ಚೀಲಕ್ಕಾಗಿ ಕೌದಿ ಹೊಲಿಯುವ, ಹಂಚಿ ಭಟ್ಟು ಚುಚ್ಚುವ, ಮೀನು ಹಿಡಿಯುವ ಅಲೆಮಾರಿ ಕಾಯಕ ಮಾಡುತ್ತಿದ್ದಾರೆ. ಆದರೆ, ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷ ಕಳೆದರೂ, ಈ ಜನರು ಮಾತ್ರ ಮೂಲಭೂತ ಸೌಕರ್ಯಗಳಿಂದ ವಂಚಿತಗೊಂಡು, ಸಮಾಜದ ಮುಖ್ಯ ವಾಹಿನಿಯಿಂದ ದೂರವೇ ಉಳಿದಿದ್ದಾರೆ!

ಹೀಗೆ ಮನೆಯ ಚೌನಿಯ ಮುಂದೆ ಕುಳಿತು ಕೌದಿ ಹೊಲಿಯುತ್ತಿರುವ ಮಹಿಳೆಯರು, ಇನ್ನೊಂದೆಡೆ ಬೀದಿಯಲ್ಲಿ ಆಟ ಆಡುತ್ತಿರುವ ಮಕ್ಕಳು, ಮತ್ತೊಂದೆಡೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿರುವ ಜನರು... ಇದು ಹುಬ್ಬಳ್ಳಿ ತಾಲೂಕಿನ ಗಿರಿಯಾಲ ಗ್ರಾಮದ ಶಿಳ್ಯೆಕೇತರ ಅಥವಾ ಶಿಳ್ಳಿಕ್ಯಾತಸ ಸಮುದಾಯದ ಪರಿಸ್ಥಿತಿ.

ಇನ್ನು, ಇವರು ತಲೆತಲಾಂತರಗಳಿಂದ ಅಲೆಮಾರಿಗಳಾಗಿದ್ದು, ಊರು ಊರು ತಿರುಗಿ ತಮ್ಮ ಮೂಲವೃತ್ತಿ ಮಾಡಿ ಬದುಕಿನ ಬಂಡಿ ಮುನ್ನಡೆಸುತ್ತಾ ಬಂದಿದ್ದಾರೆ. ಆದರೆ, ಕಳೆದ ಕೆಲವು ವರ್ಷಗಳಿಂದ ಈ ಜನರು ಗಿರಿಯಾಲ ಗ್ರಾಮದ ಹೊರವಲಯದಲ್ಲಿ ನೆಲೆಸಿ ಬದುಕು ಕಟ್ಟಿಕೊಂಡಿದ್ದಾರೆ. ಇವರಿಗೆ ಸರ್ಕಾರದ ಯೋಜನೆಗಳು ಮರೀಚಿಕೆಯಾಗಿವೆ.

ಹೀಗಾಗಿಯೇ ತಾವು ಸಮಾಜದ ಇತರರಂತೆ ಮುಖ್ಯವಾಹಿನಿಗೆ ಬಂದು, ಮಕ್ಕಳಿಗೆ ಶಿಕ್ಷಣ ಸೇರಿದಂತೆ ಮತ್ತಿತರ ಸೌಲಭ್ಯ ಕೊಡಬೇಕೆಂದು ಹಲವಾರು ವರ್ಷಗಳಿಂದ ಸರ್ಕಾರಕ್ಕೆ ಮನವಿ ಮಾಡುತ್ತಲೇ ಬರುತ್ತಿದ್ದಾರೆ. ಆದರೆ, ಸರ್ಕಾರ ಮಾತ್ರ ಸ್ಪಂದಿಸಿಲ್ಲ. ಹೀಗಾಗಿಯೇ ತಮ್ಮ ಸಮುದಾಯಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಸೇರಿದಂತೆ ಮತ್ತಿತರ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ಈ ಜನರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

- ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ

Edited By : Manjunath H D
Kshetra Samachara

Kshetra Samachara

03/09/2022 02:26 pm

Cinque Terre

41.75 K

Cinque Terre

0

ಸಂಬಂಧಿತ ಸುದ್ದಿ