ಹುಬ್ಬಳ್ಳಿ: ಹೆಚ್ಚುವರಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಬೇಡಿಕೆ ಮೆರೆಗೆ ಹುಬ್ಬಳ್ಳಿಯಿಂದ ವಾರಣಾಸಿಗೆ ಒಂದೇ ಮಾರ್ಗದ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರವನ್ನು ನೈರುತ್ಯ ರೈಲ್ವೆ ಒದಗಿಸಿದೆ. ಟ್ರೈನ್ ಸಂಖ್ಯೆ 07305 ಶ್ರೀ ಸಿದ್ಧಾರೂಡ ಸ್ವಾಮಿ ಹುಬ್ಬಳ್ಳಿ-ಬನಾರಸ್ ವಿಶೇಷ ಎಕ್ಸ್‌ಪ್ರೆಸ್ ರೈಲು ಆ.10 ರಂದು ಸಂಜೆ 6.15ಕ್ಕೆ ಹುಬ್ಬಳ್ಳಿಯ ಸಿದ್ಧಾರೂಡ ಸ್ವಾಮೀಜಿ ನಿಲ್ದಾಣದಿಂದ ಹೊರಟು ಆ.12ರಂದು ಬೆಳಿಗ್ಗೆ 8.40ಕ್ಕೆ ಬನಾರಸ್ ನಿಲ್ದಾಣ ತಲುಪುತ್ತದೆ.
ಈ ರೈಲು ಗದಗ, ಬಾದಾಮಿ, ಬಾಗಲಕೋಟೆ, ಆಲಮಟ್ಟಿ, ವಿಜಯಪುರ, ಸೊಲ್ಲಾಪುರ್, ದೌಂಡ್, ಅಹ್ಮದ್‌ನಗರ, ಕೋಪರಗಾವ್, ಮನ್ಮಾಡ್, ಭೂಸವಾಲ್, ಖಂಡ್ವಾ, ಇಟಾರ್ಸಿ, ಪಿಪರಿಯಾ, ನರಸಿಂಗಪುರ್, ಜಬಲ್ಪುರ್, ಕಟನಿ ಜಂಕ್ಷನ್, ಮೈಹಾರ, ಸತನಾ, ಮಾಣಿಕಪುರ್, ಪ್ರಯಾಗರಾಜ್, ಮಿರ್ಜಾಪುರ ಮೂಲಕ ವಾರಾಣಿಸಿ ತಲುಪುತ್ತದೆ..
ಈ ರೈಲಿನಲ್ಲಿ ಐದು ಹವಾನಿಯಂತ್ರಿತ 3 ಟೈರ್ ಬೋಗಿಗಿಳು, 11 ಸ್ಲೀಪರ್, ಬೋಗಿಗಳು, 4 ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು, ಎರಡು ದಿವ್ಯಾಂಗ ಸ್ನೇಹಿ ಕಂಪಾರ್ಟ್‌ಮೆಂಟ್‌ಗಳನ್ನು ಒಳಗೊಂಡಿರುತ್ತದೆ ಎಂದು ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
09/08/2022 05:20 pm