ಅಣ್ಣಿಗೇರಿ: ಅಣ್ಣಿಗೇರಿ ತಾಲೂಕಿನ ಶಲವಡಿ ಗ್ರಾಮದ ಎರಡನೇ ವಾರ್ಡಿನ ಮೈಲಾರಲಿಂಗೇಶ್ವರ ಓಣಿಯಲ್ಲಿ ಸರಿಯಾದ ರಸ್ತೆ ವ್ಯವಸ್ಥೆ ಇಲ್ಲ. ಇನ್ನು ಮಳೆ ಬಂದರೆ ವ್ಯಥೆ ಕೇಳುವವರೇ ಇಲ್ಲ.
ಮಳೆ ಬಂತೆಂದರೆ ಸಾಕು ಶಲವಡಿ ಗ್ರಾಮದ ಎರಡನೇ ವಾರ್ಡಿನ ಮೈಲಾರಲಿಂಗೇಶ್ವರ ಓಣಿಯಲ್ಲಿ ಹೇಳತೀರದಷ್ಟು ಸಮಸ್ಯೆ. ಇಲ್ಲಿನ ರಸ್ತೆಗಳಲ್ಲಿ ನಡೆದಾಡುವುದು ಒಂದು ಸವಾಲಿನ ಕೆಲಸ. ಇನ್ನು ಮಕ್ಕಳು, ವಯಸ್ಸಾದವರು ಪಾಡು ಹೇಳತೀರದಷ್ಟು.
ಇನ್ನೋಡಿ ಶಾಲೆಗೆ ಹೊರಟಿರುವ ಪುಟಾಣಿ ವಿದ್ಯಾರ್ಥಿಗಳು ತಮ್ಮ ಪಾದರಕ್ಷೆಗಳನ್ನು ಕೈಯಲ್ಲಿ ಹಿಡಿದು ಬರುತ್ತಿದ್ದಾರೆ. ವಯಸ್ಸಾದ ಜನರು ಈ ರಸ್ತೆಗಳನ್ನು ದಾಟುವುದೇ ಕಷ್ಟಕರವಾಗಿದೆ. ಈ ಬಗ್ಗೆ ವಾರ್ಡ್ ಮೇಂಬರ್ ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ಈ ರಸ್ತೆಯಲ್ಲಿ ವಾರ್ಡ್ ಮೇಂಬರ್, ಗ್ರಾಮ ಪಂಚಾಯತಿ ಅಧ್ಯಕ್ಷರು ನಡೆದು ಬಂದರೆ ಸಮಸ್ಯೆ ಅರ್ಥವಾಗುತ್ತೆ. ಎಷ್ಟು ಬಾರಿ ದೂರಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇನ್ನಾದರೂ ಎಚ್ಚುತ್ತುಕೊಳ್ಳಬೇಕು. ಇಲ್ಲವಾದರೆ ಅವರು ಪ್ರತಿಭಟನೆ ಎದುರಿಸಬೇಕಾಗುವುದು ಎಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.
Kshetra Samachara
05/08/2022 09:41 am