ಕುಂದಗೋಳ : ಬೆಣ್ಣೆ ಹಳ್ಳದ ಸಂಚಾರಕ್ಕೆ ನೂತನವಾಗಿ ನಿರ್ಮಿಸಿದ ಸೇತುವೆಯೊಂದು ಸಾರ್ವಜನಿಕರ ಸಂಚಾರ ಹಾಗೂ ವಾಹನ ಓಡಾಟದ ವೇಳೆ ಅಪಾಯದ ಎಚ್ಚರಿಕೆ ನೀಡುತ್ತಿದೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಈ ವಿಷಯ ತಿಳಿಯದೇ ಹೋದ್ರಾ ? ಎಂಬ ಸಂಶಯಕ್ಕೂ ಕಾರಣವಾಗಿದೆ.
ಮುಳ್ಳೊಳ್ಳಿಯಿಂದ ಯರಗುಪ್ಪಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗ ಮಧ್ಯದಲ್ಲಿ ಇರುವ ಬೆಣ್ಣೆ ಹಳ್ಳಕ್ಕೆ ಕಳೆದ ಹಲವಾರು ವರ್ಷಗಳ ನಂತರ ಸೇತುವೆ ನಿರ್ಮಿಸಲಾಗಿದೆ. ಈ ಸೇತುವೆಗೆ ತಡೆಗೋಡೆ ಇಲ್ಲದ ಕಾರಣ ಜನರ ಓಡಾಟ ವಾಹನ ಸಂಚಾರದ ವೇಳೆ ಸ್ವಲ್ಪ ಪಕ್ಕಕ್ಕೆ ಸರಿದ್ರೂ ಹಳ್ಳಕ್ಕೆ ಬಿಳೋದು ಗ್ಯಾರಂಟಿ.
ಅಷ್ಟು ಕಿರಿದಾದ ಈ ಹಳ್ಳದ ಸೇತುವೆ ಕೊನೆಯಲ್ಲಿ ದೂರ ದೂರ ಅತಿ ಸಣ್ಣದಾದ ಗೂಟು ಕಲ್ಲುಗಳನ್ನು ನಿರ್ಮಿಸಿರುವುದು ಜನರ ಓಡಾಟದ ವೇಳೆ ಅಪಾಯಕ್ಕೆ ಆಹ್ವಾನ ಕೊಟ್ಟಂತಾಗಿದೆ.
ಈ ಬೆಣ್ಣೆ ಹಳ್ಳಕ್ಕೆ ಹೊಂದಿಕೊಂಡಿರುವ ಮುಳ್ಳೊಳ್ಳಿ ಯರಗುಪ್ಪಿ ರಸ್ತೆ ಸಹ ಸಂಪೂರ್ಣ ಹಾಳಾಗಿದೆ. ನಿತ್ಯ ಮುಳ್ಳೊಳ್ಳಿಯಿಂದ ಯರಗುಪ್ಪಿಗೆ 6ರಿಂದ 10ನೇ ತರಗತಿ ಹಾಗೂ ಪಿಯುಸಿ ವ್ಯಾಸಂಗಕ್ಕೆ ವಿದ್ಯಾರ್ಥಿಗಳು ಹೋಗಲು ಸಹ ತಾಪತ್ರಯ ಎದುರಾಗಿದೆ. ಈ ಬಗ್ಗೆ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ ಗಮನಿಸಿ ಬ್ರಿಡ್ಜ್‌ಗೆ ತಡೆಗೋಡೆ ಹಾಗೂ ರಾತ್ರಿ ಸಂಚಾರಕ್ಕೆ ಬೆಳಕಿನ ವ್ಯವಸ್ಥೆ ಮಾಡುವಂತೆ ಜನತೆ ಒತ್ತಾಯಿಸಿದ್ದಾರೆ.
ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ
Kshetra Samachara
03/08/2022 08:51 pm