ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಕಿತ್ತೂರು ರಾಣಿ ಚೆನ್ನಮ್ಮ ಬ್ಯಾಂಕ್'ನಿಂದ ಗುಂಪು ಸಾಲ ವಿತರಣೆ

ಕುಂದಗೋಳ : ಕಿತ್ತೂರ ರಾಣಿ ಚನ್ನಮ್ಮ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಬ್ಯಾಂಕ್ ಕುಂದಗೋಳ ಶಾಖೆಯಲ್ಲಿ ಹುಬ್ಬಳ್ಳಿ ಪ್ರಾದೇಶಿಕ ವಿಭಾಗದಿಂದ ಇಂದು ಪ್ರಥಮ ಬಾರಿಗೆ ಸಂಸ್ಥೆಯಿಂದ 'ಗುಂಪು ಸಾಲ'ವನ್ನು ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಪರಮಪೂಜ್ಯ ಶ್ರೀ ಬಸವಣ್ಣಜ್ಜನವರ ಸಾನಿಧ್ಯದಲ್ಲಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕರಾದ ಈರಪ್ಪ ನಾನನ್ನವರ ನಾಲ್ಕು ಗುಂಪಿನ ಆರು ಸದಸ್ಯರಿಗೆ ತಲಾ 30,000/- ರೂಪಾಯಿದಂತೆ 7,20,000/- ರೂ.ಗಳ ಸಾಲವನ್ನು ಗ್ರಾಹಕರಿಗೆ ವಿತರಿಸಿದರು.

ಈ ಸಂದರ್ಭದಲ್ಲಿ ಪ್ರಧಾನ ಕಚೇರಿಯ ಬಂಗಾರ ಸಾಲ ವಿಭಾಗದ ಮುಖ್ಯಸ್ಥರಾದ ಸುದರ್ಶನ್ ಉಪಾಧ್ಯಯ ಹಾಗೂ ಹುಬ್ಬಳ್ಳಿ ವಿಭಾಗದ ಪ್ರಾದೇಶಿಕ ವ್ಯವಸ್ಥಾಪಕರಾದ ಗಡ್ಡೆಪ್ಪ ಹತ್ತಿ ಮತ್ತು ಹಿರಿಯ ವ್ಯವಸ್ಥಾಪಕರಾದ ಹನಿಫ ಇಂಗಳಹಳ್ಳಿ, ಶಾಖೆಯ ವ್ಯವಸ್ಥಾಪಕರಾದ ಬಸಯ್ಯ ಬಸವಳಿಮಠ ಸಹಾಯಕರಾದ ಶೋಭಾ ನೆರ್ತಿ, ಕವಿತಾ ಮುದಗಣ್ಣವರ, ರಾಘವೇಂದ್ರ ಸುಂಕನ್ನವರ, ಫೀಲ್ಡ್ ಆಫೀಸರ್ ಮಂಜುನಾಥ, ಸತೀಶ, ನಾಗರಾಜ, ಜಗದೀಶ್ ಉಪಸ್ಥಿತರಿದ್ದರು.

ಈ ವೇಳೆ ಅಭಿನವ ಕಲ್ಯಾಣಪುರ ಬಸವಣ್ಣನವರಿಗೆ ಸನ್ಮಾನ ಮಾಡಲಾಯಿತು.

Edited By : PublicNext Desk
Kshetra Samachara

Kshetra Samachara

28/07/2022 12:32 pm

Cinque Terre

12.41 K

Cinque Terre

0

ಸಂಬಂಧಿತ ಸುದ್ದಿ