ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಕೆಂಪು ಕೆಂಪಾದ ಬಸ್ ನಿಲ್ದಾಣ, ನೆಮ್ಮದಿಯಿಂದ ಕೂರಲು ಆಗದ ದುಸ್ಥಿತಿ

ನವಲಗುಂದ: ಇದು ನವಲಗುಂದ ಪಟ್ಟಣದ ಬಸ್ ನಿಲ್ದಾಣ. ಸಚಿವರ ಸ್ವಕ್ಷೇತ್ರ. ಸಾವಿರಾರು ಜನ ಸಂಚರಿಸುವ ಪ್ರಮುಖ ಸ್ಥಳ ಈಗ ಗಬ್ಬೆದ್ದು ನಾರುತ್ತಿದೆ. ಕೊಳಚೆ ತಾಂಡವಕ್ಕೆ ಕಡಿವಾಣ ಹಾಕಲು ಅಧಿಕಾರಿಗಳು ವಿಫಲರಾಗಿದ್ದಾರೆ ಎಂಬ ಮಾತು ಸಹ ಸಾರ್ವಜನಿಕ ವಲಯದಲ್ಲಿದೆ.

ಸಾರ್ವಜನಿಕರು ಎಲ್ಲಿ ಬೇಕಲ್ಲಿ ಗುಟ್ಕಾ, ಎಲೆ ಅಡಿಕೆ ತಿಂದು ಉಗುಳುತ್ತಿರೋದು ಇಲ್ಲಿನ ಸಿಬ್ಬಂದಿಗೂ ತಲೆ ನೋವಾಗಿದೆ. ಚಟ ಮಾಡೋದೂ ಅಲ್ಲದೇ ಕೆಲ ಕಿಡಿಗೇಡಿಗಳು ಎಲೆ-ಅಡಿಕೆ ಗುಟಖಾ ತಿಂದು ಬಸ್ ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ಉಗಿಯುತ್ತಿದ್ದಾರೆ. ಇನ್ನು ವೃದ್ಧರು ಇಂತಹ ಉಗುಳಿದ ಸ್ಥಳಗಳಲ್ಲೇ ಅನಿವಾರ್ಯತೆಯಿಂದ ಕುಳಿತುಕೊಳ್ಳುವ ದುಸ್ಥಿತಿ ಉಂಟಾಗಿದೆ. ಮೊದಲು ಸಾರ್ವಜನಿಕರು ಕೂಡ ಜಾಗೃತಗೊಳ್ಳಬೇಕಿದೆ. ಹಾಗೂ ಅಧಿಕಾರಿಗಳು ಸ್ಥಳ ನಿರ್ವಹಣೆ ಮಾಡಬೇಕಿದೆ.

Edited By : Manjunath H D
Kshetra Samachara

Kshetra Samachara

18/07/2022 06:21 pm

Cinque Terre

56.55 K

Cinque Terre

0

ಸಂಬಂಧಿತ ಸುದ್ದಿ