ಕಲಘಟಗಿ : ಕಲಘಟಗಿ ಯಿಂದ ಸಂಗಮೇಶ್ವರ ಗ್ರಾಮಕ್ಕೆ ಹೋಗುವ ರಸ್ತೆ ಮಧ್ಯೆ ವಿದ್ಯುತ್ ಕಂಬವೊಂದು ಮುರಿದು ಬಿದ್ದು ಒಂದು ತಿಂಗಳು ಕಳೆಯುತ್ತಾ ಬಂದರು ಸಂಬಂಧಿಸಿದ ಅಧಿಕಾರಿಗಳು ಮಾತ್ರ ಇತ್ತಕಡೆ ಗಮನ ಹರಿಸಿಲ್ಲ.
ಸದ್ಯ ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಈ ವಿದ್ಯುತ್ ಕಂಬ ಮರದ ಸಹಾಯದಿಂದ ನಿಂತಿದ್ದು. ಇಲ್ಲಿ ದಿನನಿತ್ಯ ನೂರಾರು ವಾಹನಗಳು ಹಾಗೂ ದನಕರುಳು ಮತ್ತು ಕಾಡು ಪ್ರಾಣಿಗಳು ಒಡಾಡುತ್ತವೆ. ಹಾಗಾಗಿ ಅವಘಡ ಸಂಭವಿಸುವ ಮೊದಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಇತ್ತಕಡೆ ಗಮನ ಹರಿಸಿ ಮುರಿದು ಬಿದ್ದ ವಿದ್ಯುತ್ ಕಂಬವನ್ನು ತೆಗೆದು ಹೊಸ ಕಂಬ ಅಳವಡಿಸುವರೆ ಎನ್ನುವುದನ್ನು ಕಾದು ನೋಡಬೇಕಿದೆ.
ವರದಿ : ಉದಯ ಗೌಡರ
Kshetra Samachara
10/07/2022 03:31 pm