ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: "ಬಸ್ ವ್ಯವಸ್ಥೆ ಮಾಡಿ ಕೊಡಿ"; ವಿದ್ಯಾರ್ಥಿಗಳಿಂದ ಶಾಸಕರಿಗೆ ಮನವಿ

ಕಲಘಟಗಿ: ತಾಲೂಕಿನ ಜಿನ್ನೂರು ಗ್ರಾಮಕ್ಕೆ ಸರಿಯಾದ ಬಸ್ ವ್ಯವಸ್ಥೆ ಇಲ್ಲದೇ ಇರುವುದರಿಂದ ಶಾಲಾ- ಕಾಲೇಜುಗಳಿಗೆ ಹೋಗಲು ಹಾಗೂ ಮರಳಿ ಊರಿಗೆ ತೆರಳಲು ತುಂಬಾ ತೊಂದರೆ ಆಗುತ್ತಿದೆ ಎಂದು ವಿದ್ಯಾರ್ಥಿಗಳು ಇಂದು ಶಾಸಕರ ಮನೆಗೆ ತೆರಳಿ ಮನವಿ ಮಾಡಿದರು.

ಕ್ಲಪ್ತ ಸಮಯಕ್ಕೆ ಬಸ್ಸುಗಳು ಬಾರದೇ ಇರುವ ಕಾರಣ ಅನಿವಾರ್ಯವಾಗಿ ತರಗತಿಗೆ ತಡವಾಗಿಯೇ ಹೋಗಬೇಕಾಗಿದೆ. ಇದರಿಂದಾಗಿ ಕಾಲೇಜುಗಳಲ್ಲಿ ನಮಗೆ ಕ್ಲಾಸ್‌ ಗೆ ಪ್ರವೇಶ ನೀಡುತ್ತಿಲ್ಲ. ಇದು ನಮ್ಮ ಕಲಿಕೆಗೆ ತೊಂದರೆ ಆಗುತ್ತಿದೆ. ಕೂಡಲೇ ಈ ಸಮಸ್ಯೆಯನ್ನು ಬಗೆಹರಿಸಲು ಶಾಸಕರಿಗೆ ಮನವಿ ಮಾಡಿದರು.

ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿದ ಶಾಸಕರು, ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ಮಾಡಿ ಬಸ್ಸುಗಳನ್ನು ಬಿಡುವ ವ್ಯವಸ್ಥೆ ಕೂಡಲೇ ಮಾಡುವಂತೆ ಆದೇಶಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

28/06/2022 05:55 pm

Cinque Terre

23.9 K

Cinque Terre

0

ಸಂಬಂಧಿತ ಸುದ್ದಿ