ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿಯಲ್ಲಿ ಅಪಾಯಕ್ಕೆ ಆಹ್ವಾನ ನೀಡುತ್ತಿರುವ ವಿದ್ಯುತ್ ತಂತಿಗಳು

ಕಲಘಟಗಿ: ಕಲಘಟಗಿ ಪಟ್ಟಣದ ಜ್ಯೋತಿ ನಗರ ಹಾಗೂ ಬೆಂಡಿಗೇರಿ ಒಣಿಯಲ್ಲಿ ವಿದ್ಯುತ್ ಕಂಬಗಳ ಲೈನ್‌ಗಳು ಜೋತು ಬಿದ್ದಿದ್ದು ಅಪಾಯಕ್ಕೆ ಆಹ್ವಾನ ನೀಡುವಂತಾಗಿದೆ.

ಈ ರಸ್ತೆಯಲ್ಲಿ ದೊಡ್ಡ ವಾಹನಗಳು ಒಡಾಡುವಾಗ ವಾಹನಕ್ಕೆ ತಂತಿಗಳು ತಗುಲುವ ರೀತಿಯಲ್ಲಿ ಜೋತಾಡುತ್ತಿದ್ದು ಗಾಳಿಗೆ ಒಂದಕ್ಕೊಂದು ತಗುಲಿ ಶಾರ್ಟ ಸರ್ಕ್ಯೂಟ್ ಆಗಿ ಅಪಾಯ ಸಂಭವಿಸುವ ಮುನ್ಸೂಚನೆ ನೀಡುತ್ತಿವೆ. ಇದರಂತೆಯೇ ಪಟ್ಟಣದ ಹಲವು ಕಡೆ ಅಪಾಯ ಕಂಡು ಬಂದಿದೆ. ಅನಾಹುತ ಸಂಭವಿಸುವ ಮುನ್ನ ಸಂಬಂಧ ಪಟ್ಟ ಅಧಿಕಾರಿಗಳು ಇವುಗಳನ್ನು ಸರಿ ಪಡಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Edited By :
Kshetra Samachara

Kshetra Samachara

14/06/2022 01:14 pm

Cinque Terre

12.72 K

Cinque Terre

0

ಸಂಬಂಧಿತ ಸುದ್ದಿ