ಅಳ್ನಾವರ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹೊನ್ನಾಪೂರ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು.
ನವರಸ ಸ್ನೇಹಿತರ ವೇದಿಕೆಯ ಅಧ್ಯಕ್ಷರೂ ಹಾಗೂ ಶಿಕ್ಷಕರೂ ಆದ ಬಾಬಾಜಾನ ಮುಲ್ಲಾ ಪರಿಸರ ದಿನದ ಮಹತ್ವದ ಕುರಿತು ವಿವರಿಸಿ,ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಪರಿಸರ ಪ್ರಜ್ಞೆ ಮೂಡುತ್ತಿದ್ದು, ಹಸಿರು ವಲಯ ಕ್ರಮೇಣ ಹೆಚ್ಚಾಗುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು.ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ 'ದೇವರ ಕಾಡು' ಎಂಬ ಪರಿಕಲ್ಪನೆಯೊಂದಿಗೆ ಅರಣ್ಯ ರಕ್ಷಿಸುವ ಕಾರ್ಯ ನಡೆದಿದ್ದು,ನಮ್ಮ ಪಂಚಾಯಿತಿ ವ್ಯಾಪ್ತಿಯ ಅರಣ್ಯ ಪ್ರದೇಶಕ್ಕೂ ದೇವರ ಹೆಸರನ್ನಿಟ್ಟು ಸಂರಕ್ಷಿಸಬೇಕು ಎಂದು ಸಲಹೆ ನೀಡಿದರು.
ನಂತರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಖುತೇಜಾ ಡೋನಸಾಲ ಅವರಿಂದ ಸಸಿ ನೆಡುವ ಕಾರ್ಯಕ್ರಮ ಜರುಗಿತು.ಪಂಚಾಯತ್ ಸದಸ್ಯರಾದ ತೇಜಸ್ ದೊಡಮನಿ,ಶಾಂತವ್ವ ಕ್ಷಾತ್ರತೇಜ,ಹಾಗೂ ಪಂಚಾಯತ ಅಭಿವೃದ್ಧಿ ಅಧಿಕಾರಿ ರೇಣುಕಾ ಕೊಪ್ಪದ,ಅರಣ್ಯ ಇಲಾಖೆಯ ಬಸವರಾಜ ಕರಡಿ,ರಮೇಶ್ ಹೂಗಾರ, ಪಂಚಾಯತ್ ಸಿಬ್ಬಂದಿಗಳಾದ ಲಕ್ಷ್ಮಣ,ವಿಜಯ, ಭೀಮಪ್ಪ,ಶ್ರೀಮಂತ್ ಮುಂತಾದವರು ಉಪಸ್ಥಿತರಿದ್ದರು.
Kshetra Samachara
06/06/2022 09:21 am