ಧಾರವಾಡ: ಐತಿಹಾಸಿಕ ಹಿನ್ನೆಲೆಯುಳ್ಳ ಸ್ಥಳಗಳನ್ನು ಸ್ವಚ್ಛಗೊಳಿಸುವ ಉದ್ದೇಶದಿಂದ ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿಯ ಯುವಕರ ಗುಂಪೊಂದು ತಂಡವನ್ನು ಕಟ್ಟಿಕೊಂಡಿದ್ದು, ಆ ತಂಡದ ಸದಸ್ಯರು ಐತಿಹಾಸಿಕ ಹಿನ್ನೆಲೆಯುಳ್ಳ ಸ್ಥಳಗಳನ್ನು ಸ್ವಚ್ಛಗೊಳಿಸುವ ಕಾರ್ಯ ಮಾಡುತ್ತಿದ್ದಾರೆ.
ಅದೇ ರೀತಿ ಬೆಳಗಾವಿ ಜಿಲ್ಲೆ ಕಿತ್ತೂರು ಪಟ್ಟಣದಲ್ಲಿರುವ ಐತಿಹಾಸಿಕ ಹಿನ್ನೆಲೆಯುಳ್ಳ ಕಲ್ಮಠದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದ ಯುವಕರ ಪಡೆ ಅಲ್ಲಿನ ಮಠಾಧೀಶರಿಂದ ಶಹಬ್ಬಾಷ್‌ಗಿರಿ ಗಿಟ್ಟಿಸಿಕೊಂಡಿದ್ದಾರೆ.
ಕಲ್ಮಠದಲ್ಲಿರುವ ರಾಜರ ಸಮಾಧಿ ಜಾಗ ಹಾಗೂ ಗಿಡ, ಗಂಟಿಗಳಿಂದ ಮುಚ್ಚಿದ್ದ ಗೋಡೆಗಳನ್ನು ಸ್ವಚ್ಛಗೊಳಿಸಿದ್ದಾರೆ. ಇತಿಹಾಸದ ಗತ ವೈಭವ ಸಾರುವ ಜಾಗಗಳನ್ನು ಉಳಿಸಿ, ಸಂರಕ್ಷಿಸುವುದಕ್ಕೋಸ್ಕರವೇ ಉಪ್ಪಿನ ಬೆಟಗೇರಿ ಯುವಕರ ತಂಡವು ವಾಟ್ಸಪ್ ಗ್ರೂಪ್ ಒಂದನ್ನು ರಚನೆ ಮಾಡಿ ಆ ಸದಸ್ಯರ ಮೂಲಕ ಈ ಸಾಮಾಜಿಕ ಕಾರ್ಯ ಮಾಡಲಾಗುತ್ತಿದೆ. ಕಲ್ಮಠದ ಮಡಿವಾಳ ರಾಜಯೋಗೇಂದ್ರ ಸ್ವಾಮೀಜಿಗಳು ಈ ಯುವಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
Kshetra Samachara
31/05/2022 09:11 pm