ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಸಿದ್ದಾಪುರ ಓಣಿಯಲ್ಲಿನ ಚರಂಡಿ ಅವ್ಯವಸ್ಥೆಯಿಂದ ಬೇಸತ್ತ ಸ್ಥಳೀಯರು

ನವಲಗುಂದ: ಚರಂಡಿ ಇದ್ದರೂ ಸ್ವಚ್ಛತೆ ಇಲ್ಲ. ಮನವಿ ನೀಡಿದ್ರೂ ಅಧಿಕಾರಿಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ. ನಾವು ಬದುಕೋದೇ ಕಷ್ಟವಾಗಿದೆ ಎಂಬ ಮಾತುಗಳು ಈಗ ನವಲಗುಂದ ಪಟ್ಟಣದ ಸಿದ್ದಾಪುರ ಓಣಿಯಲ್ಲಿನ ಸ್ಥಳೀಯರದ್ದಾಗಿದೆ.

ಮಳೆಯ ಅವಾಂತರಕ್ಕೆ ಈಗಾಗಲೇ ಬೇಸತ್ತು ಹೋಗಿರುವ ಸ್ಥಳೀಯರ ಗೋಳು ಒಂದೆಡೆ ಆದ್ರೆ, ಅಸ್ವಚ್ಛತೆಯ ಆಗರವಾದ ಚರಂಡಿಯಿಂದ ಬದುಕು ಅತಂತ್ರವಾದ ಪರಿಸ್ಥಿತಿಗೆ ಬಂದು ನಿಂತಿದೆ. ಕಳೆದ ಏಳೆಂಟು ತಿಂಗಳಿನಿಂದ ಸರಿಯಾಗಿ ಚರಂಡಿಯ ಸ್ವಚ್ಛತೆ ಆಗದಿರೋದ್ರಿಂದ ಕೊಳಚೆ ನೀರಿನಲ್ಲಿರುವ ವಿಷಕಾರಿ ಹುಳುಗಳು ಒಮ್ಮೊಮ್ಮೆ ಮನೆ ಒಳಗೂ ಹರಿದಾಡುತ್ತವೆ. ಸೊಳ್ಳೆಗಳ ಕಾಟ ವಿಪರೀತವಾಗಿದೆ. ಸಾಂಕ್ರಾಮಿಕ ರೋಗದ ಆತಂಕ ಸಹ ಹೆಚ್ಚಿದೆ ಎನ್ನುವ ಅಸಹಾಯಕ ಮಾತುಗಳು ಸ್ಥಳೀಯರದ್ದು.

ಇನ್ನು ಪುರಸಭೆಗೆ ಹೊಂದಿಕೊಂಡಿರುವ ಸಿದ್ದಾಪುರ ಓಣಿಯಯಲ್ಲಿ ಚರಂಡಿ ತುಂಬಿ ನೀರು ಹರಿಯದೇ ಕೊಳಚೆ ಸಂಗ್ರಹಗೊಂಡು ವಿಪರೀತ ದುರ್ನಾತ ಬೀರುತ್ತಿದೆ. ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿ ವೀರಪ್ಪ ಹಸಬಿ ಅವರು ಗಮನ ಹರಿಸಿ, ಚರಂಡಿಯ ಸಂಪೂರ್ಣ ಸ್ವಚ್ಛತೆಗೆ ಮುಂದಾಗಬೇಕು ಎಂಬ ಆಗ್ರಹ ಸ್ಥಳೀಯರದ್ದಾಗಿದೆ.

Edited By : Shivu K
Kshetra Samachara

Kshetra Samachara

23/05/2022 01:10 pm

Cinque Terre

26.59 K

Cinque Terre

0

ಸಂಬಂಧಿತ ಸುದ್ದಿ