ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ತಹಶೀಲ್ದಾರ ಕಚೇರಿಯಲ್ಲಿ ಸಂಗ್ರಹವಾದ ನೀರು ಹೊರಹಾಕಿದ ಪ.ಪಂ

ಕುಂದಗೋಳ : ತಹಶೀಲ್ದಾರ ಕಚೇರಿಯಲ್ಲಿ ಕಳೆದ ಎರೆಡು ದಿನಗಳಿಂದ ಸುರಿಯುತ್ತಿರುವ ಮಳೆಯ ಪರಿಣಾಮ ಸಂಗ್ರಹವಾದ ಮಳೆ ನೀರನ್ನು ಪಟ್ಟಣ ಪಂಚಾಯತ ಅಧ್ಯಕ್ಷ ಗಣೇಶ ಕೊಕಾಟೆ ವೀಕ್ಷಿಸಿ ತಹಶೀಲ್ದಾರ ಜೊತೆ ಚರ್ಚಿಸಿ ಆವರಣದಲ್ಲಿನ ಮಳೆ ನೀರನ್ನು ತೆರವುಗೊಳಿಸುವ ಕುರಿತು ಪರಿಶೀಲನೆ ಮಾಡಿದರು.

ಬಳಿಕ ಪಟ್ಟಣ ಪಂಚಾಯಿತಿ ಪೌರ ಕಾರ್ಮಿಕರ ನೇತೃತ್ವದಲ್ಲಿ ಕಾಂಪೌಂಡ್ ಗೋಡೆ ನೀರು ಹೋಗುವ ಪೈಪ್ಲೈನ್ ದುರಸ್ತಿ ಪಡಿಸಿ ಬ್ಲಾಕ್ ಆಗಿದ್ದ ಚರಂಡಿಗಳನ್ನು ನಿರ್ವಹಣೆ ಮಾಡಿ ಮಳೆಗೆ ಸಂಗ್ರಹವಾದ ನೀರನ್ನು ಹೊರ ಹಾಕಲಾಯಿತು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸರ್ವ ಸದಸ್ಯರು ಹಾಗೂ ಅಧಿಕಾರಿಗಳು ಪೌರಕಾರ್ಮಿಕರು ಕಲುಷಿತ ನೀರನ್ನು ಹೊರಹಾಕಲು ಸಹಕಾರ ನೀಡಿ ನೈರ್ಮಲ್ಯ ವಾತಾವರಣ ಕಲ್ಪಿಸಿದರು.

Edited By : PublicNext Desk
Kshetra Samachara

Kshetra Samachara

21/05/2022 11:19 am

Cinque Terre

8.18 K

Cinque Terre

0

ಸಂಬಂಧಿತ ಸುದ್ದಿ