ಹುಬ್ಬಳ್ಳಿ: ನಗರದ ಐಬಿಎಂಆರ್ ಪದವಿ ಕಾಲೇಜಿನ ಬಿಸಿಎ ವಿಭಾಗದಲ್ಲಿ ಹಾಗೂ ಡಿಲೈತ ಕನ್ಸಲ್ಟೆನ್ಸಿ ಸರ್ವಿಸಸ್ ಪ್ರೈ. ಲಿಮಿಟೆಡ್ ಬೆಂಗಳೂರು ಸಹಯೋಗದಲ್ಲಿ IoT (ಇಂಟರ್ನೆಟ್ ಆಫ್ ಥಿಂಗ್ಸ್) ಮತ್ತು ಸೈಬರ್ ಭದ್ರತೆಗಾಗಿ ಶ್ರೇಷ್ಠತೆಯ ಕೇಂದ್ರವನ್ನು ಉದ್ಘಾಟನೆ ಮಾಡಲಾಯಿತು.
ಈ ವೇಳೆ ಮಾತನಾಡಿದ ಸುಮಾ ಮಹೇಂದ್ರಕರ್ ಅವರು, ಪ್ರಸ್ತುತ ದಿನಮಾನದಲ್ಲಿ ಹೊಸ ತಂತ್ರಜ್ಞಾನ ಮತ್ತು ತಾಂತ್ರಿಕ ಪ್ರಗತಿಗಳ ಕೌಶಲ್ಯಗಳನ್ನು ಗಳಿಸುವ ಪ್ರಾಮುಖ್ಯತೆಯನ್ನು ತಿಳಿಸಿದರು. ಜೊತೆಗೆ ಕ್ಯಾಂಪಸ್‌ನಲ್ಲಿ CoE ಅನ್ನು ಹೊಂದಿದ್ದಕ್ಕಾಗಿ BCA ಇಲಾಖೆಯ ಉಪಕ್ರಮವನ್ನು ಹಾರೈಸಿದರು ಮತ್ತು ಶ್ಲಾಘಿಸಿದರು.
ಕ್ಯಾಂಪಸ್‌ನಲ್ಲಿ ರಿಸರ್ಚ್ ಮತ್ತು ಡೆವಲಪ್ಮೆಂಟ್ ಕಾರ್ಯಗಳೊಂದಿಗೆ, ಉತ್ಪನ್ನ ಅಭಿವೃದ್ಧಿ ಮನಸ್ಥಿತಿಯನ್ನು ನಿರ್ಮಿಸುವುದು CoE ಕೇಂದ್ರದ ಮುಖ್ಯ ಉದ್ದೇಶವಾಗಿದೆ. ಎಂಬೆಡೆಡ್ ಸಿಸ್ಟಮ್‌ಗಳಲ್ಲಿನ ಪ್ರಗತಿಗಳು, ಸಂಶೋಧನೆ ಮತ್ತು ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸುವುದರ ಜೊತೆಗೆ ಇತ್ತೀಚಿನ ಮಾರುಕಟ್ಟೆ ಪ್ರವೃತ್ತಿಗಳಲ್ಲಿ IoT ಮತ್ತು ಸೈಬರ್ ಭದ್ರತೆ ಪ್ರಮುಖ ತಂತ್ರಜ್ಞಾನ ಕೌಶಲ್ಯಗಳ ಬೆಳವಣಿಗೆ ಬಗ್ಗೆ ಉತ್ತರ ಕರ್ನಾಟಕದ ಮಕ್ಕಳಿಗೆ ತಿಳಿಸಿಕೊಡುವುದು ಒಂದು ಉತ್ತಮ ಪ್ರಯತ್ನವನ್ನು IBMR ಮತ್ತು DLithe ಕಂಪನಿ ಮಾಡಲಿದೆ.
ಅರುಣ ರಾಜಪುರೋಹಿತ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಇನ್ನು ಐಬಿಎಂಆರ್ ಪದವಿ ಕಾಲೇಜಿನ ಬಿಸಿಎ ವಿಭಾಗದ ಪ್ರಾಂಶುಪಾಲರಾದ ಪ್ರೊ.ಶಿವಯೋಗಿ ವಿ ಹುಬ್ಳೀಕರ್, ಐಬಿಎಂಆರ್ ಅಧ್ಯಕ್ಷ ವಿನಯಚಂದ್ರ ಮಹೇಂದ್ರಕರ್, ಐಬಿಎಂಆರ್ ಟ್ರಸ್ಟಿ ಸುಮಾ ಮಹೇಂದ್ರಕರ್, ಕಾರ್ಯನಿರ್ವಾಹಕ ನಿರ್ದೇಶಕ ರಿಯಾಜ್ ಬಸ್ರಿ, ನಿರ್ದೇಶಕರು ಅರುಣ ರಾಜಪುರೋಹಿತ, ಆರ್ಕಿಟೆಕ್ಟ್ ವಿಜಯ್ ಜಿ.ಹೆಚ್ ಉಪಸ್ಥಿತರಿದ್ದರು.
Kshetra Samachara
09/05/2022 05:43 pm