ಕುಂದಗೋಳ: ಆಧುನಿಕತೆ ಎಷ್ಟೇ ಮುಂದುವರೆದರೂ ಇಲ್ಲೊಂದು ಗ್ರಾಮದಲ್ಲಿ ಜನ ಕಳೆದ ನಾಲ್ಕು ದಿನಗಳಿಂದ ಮೇಣದಬತ್ತಿ, ದೇವರ ಮುಂದಿನ ದೀಪದ ಬೆಳಕಲ್ಲಿ ರಾತ್ರಿ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕುಂದಗೋಳ ತಾಲೂಕಿನ ಬೃಹತ್ ಮೂರನೇ ಗ್ರಾಮ ಎನಿಸಿಕೊಂಡ ಗುಡಗೇರಿ ಗ್ರಾಮದಲ್ಲಿ ಕಳೆದ ನಾಲ್ಕು ದಿನಗಳಿಂದ ವಿದ್ಯುತ್ ಸ್ಥಗಿತಗೊಂಡಿದೆ. ಈ ಪರಿಣಾಮ ಮಕ್ಕಳಿಗೆ ಬೇಸಿಗೆ ರಜೆ ಅಭ್ಯಾಸ ಸೇರಿದಂತೆ ಹಲವಾರು ಪ್ರಮುಖ ಕೆಲಸಗಳಿಗೆ ಅಡೆತಡೆ ಉಂಟಾಗಿದೆ. ಇನ್ನೂ ವಿಶೇಷವಾಗಿ ಗುಡಗೇರಿ ಗ್ರಾಮದಲ್ಲಿ ಅಭಿನವ ಕಲ್ಯಾಣಪುರ ಬಸವಣ್ಣನವರು ಬೆಳಗು ಪ್ರವಚನ ಸಹ ಆರಂಭವಾಗಿದ್ದರೂ, ಮಳೆ ಗಾಳಿ ಇರದೇ ಯಾಕೆ? ವಿದ್ಯುತ್ ಸ್ಥಗಿತಗೊಂಡಿದೆ ಎಂಬುದು ಸಾರ್ವಜನಿಕರ ಪ್ರಶ್ನೆ
ಸವಣೂರು ಲಕ್ಷ್ಮೇಶ್ವರ ವಿದ್ಯುತ್ ಘಟಕದಿಂದ ವಿದ್ಯುತ್ ಪಡೆದ ಗುಡಗೇರಿ ಗ್ರಾಮಕ್ಕೆ ಈ ರೀತಿ ಅವ್ಯವಸ್ಥೆ ತಲೆದೋರಿದ್ದು ಸ್ಥಳೀಯ ಗ್ರಾಮ ಪಂಚಾಯಿತಿ ಏನು ಮಾಡುತ್ತಿದೆ ಎಂಬ ಪ್ರಶ್ನೆ ಜನರದ್ದಾಗಿದೆ. ಸದ್ಯ ಜನರೇ ಪಬ್ಲಿಕ್ ನೆಕ್ಸ್ಟ್‌ಗೆ ವಿಡಿಯೋ ಕಳುಹಿಸಿ ಸಮಸ್ಯೆ ವಿವರಿಸಿದ್ದಾರೆ.
Kshetra Samachara
09/05/2022 10:36 am