ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಅಡಿಯಲ್ಲಿ ಬೈಸಿಕಲ್ ನಿಲ್ದಾಣಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ ಅಲ್ಲಿ ಸೈಕಲ್‌ಗಳು ನಿಲ್ಲುತ್ತಿಲ್ಲ. ಹೊರತಾಗಿ ಈ ಜಾಗ ಬಟ್ಟೆ ಮಾರಾಟದ ಮಳಿಗೆಯಾಗಿದೆ.
ಹೀಗೆ ಸೈಕಲ್‌ಗಳನ್ನು ನಿಲ್ಲಿಸಬೇಕಿದ್ದ ನಿಲ್ದಾಣದಲ್ಲಿ ಬಟ್ಟೆಗಳನ್ನು ಇಟ್ಟು ಮಾರಾಟ ಮಾಡುತ್ತಿರುವ ದೃಶ್ಯಗಳು ಕಂಡು ಬಂದಿದ್ದು ನಗರದ ಶಿರೂರ ಪಾರ್ಕ್ ಎಚ್.ಕೆ ಪಾಟೀಲ್ ಕಾಲೇಜು ಎದುರಿಗೆ ಇರುವ ಬೈಸಿಕಲ್ ನಿಲ್ದಾಣದಲ್ಲಿ. ಸ್ಮಾರ್ಟ್ ಸಿಟಿ ಅಡಿಯಲ್ಲಿ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸುಮಾರು 10ಕ್ಕಿಂತ ಹೆಚ್ಚು ಸೈಕಲ್ ನಿಲ್ದಾಣಗಳನ್ನು ನಿರ್ಮಾಣ ಮಾಡಿದ್ದಾರೆ. ಆದರೆ ಅಲ್ಲಿ ಸೈಕಲ್‌ಗಳನ್ನು ಇಟ್ಟು ಜನರಿಗೆ ಯಾವಾಗ ನೀಡುತ್ತಾರೆ ಎಂಬುದು ತಿಳಿಯದಂತಾಗಿದೆ. ಅಧಿಕಾರಿಗಳು ವ್ಯವಸ್ಥೆಗೆ ತಕ್ಕಂತೆ ಸೌಕರ್ಯಗಳನ್ನು ಒದಗಿಸಿದರೆ ಈ ರೀತಿಯ ದೃಶ್ಯಗಳು ಕಾಣುವುದಿಲ್ಲ. ಆದಷ್ಟು ಬೇಗ ಸ್ಮಾರ್ಟ್ ಸಿಟಿ ಅಧಿಕಾರಿಗಳು ಸೈಕಲ್‌ಗಳನ್ನು ಇಟ್ಟು ಜನರಿಗೆ ಅನುಕೂಲ ಮಾಡಬೇಕಾಗಿದೆ.
ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ
Kshetra Samachara
15/04/2022 03:54 pm