ಧಾರವಾಡ: ಗಬ್ಬೆದ್ದು ನಾರುತ್ತಿದೆ ದೊಡ್ಡ ಚರಂಡಿ,ಹೇಳೋರಿಲ್ಲ ಕೇಳೋರಿಲ್ಲ ಎಂಬ ಶೀರ್ಷಿಕೆಯಡಿ ನಿನ್ನೆಯಷ್ಟೇ ನಿಮ್ಮ ಪಬ್ಲಿಕ್ ನೆಕ್ಸ್ಟ್ ಧಾರವಾಡದ ವಾರ್ಡ್ ನಂಬರ್ 5ರಲ್ಲಿ ಬರುವ ದೊಡ್ಡ ಚರಂಡಿ ಬಗ್ಗೆ ಮಾಡಿದ್ದ ವರದಿಗೆ ಸ್ಪಂದಿಸಿದ ಪಾಲಿಕೆ ಅಧಿಕಾರಿಗಳು ಇಂದು ಬೆಳ್ಳಂಬೆಳಿಗ್ಗೆ ಆ ಚರಂಡಿಯನ್ನು ಸ್ವಚ್ಛಗೊಳಿಸುವ ಕೆಲಸ ಮಾಡಿದ್ದಾರೆ.
ಧಾರವಾಡದ ಕೆಎಸ್‌ಆರ್‌ಟಿಸಿ ಡಿಪೊ ಮುಂಭಾಗದಲ್ಲಿ ಈ ದೊಡ್ಡ ಚರಂಡಿ ಇದ್ದು, ಅದರಲ್ಲಿ ಪ್ಲಾಸ್ಟಿಕ್ ಸೇರಿದಂತೆ ಕಸ ಕಡ್ಡಿ ತುಂಬಿಕೊಂಡು ಗಬ್ಬೆದ್ದು ನಾರುತ್ತಿತ್ತು. ಮಳೆ ನೀರು ಸರಾಗವಾಗಿ ಹರಿದು ಹೋಗದೇ ನೀರು ಮೇಲೆ ಬಂದು ಮನೆಗಳಿಗೆ ನುಗ್ಗುತ್ತಿತ್ತು. ಕಳೆದ ಏಳೆಂಟು ತಿಂಗಳ ಹಿಂದೆಯೇ ಈ ಚರಂಡಿ ಬ್ಲಾಕ್ ಆಗಿತ್ತು. ನಿನ್ನೆಯಷ್ಟೇ ಈ ಕುರಿತು ನಿಮ್ಮ ಪಬ್ಲಿಕ್ ನೆಕ್ಸ್ಟ್ ವರದಿಯೊಂದನ್ನು ಪ್ರಸಾರ ಮಾಡಿತ್ತು. ಈ ವರದಿಯಿಂದ ಎಚ್ಚೆತ್ತ ಅಧಿಕಾರಿಗಳು ಇಂದು ಬೆಳ್ಳಂಬೆಳಿಗ್ಗೆ ಜೆಸಿಬಿ ಸಹಾಯದಿಂದ ಚರಂಡಿಯನ್ನು ಸ್ವಚ್ಛಗೊಳಿಸಿ ಆ ಭಾಗದ ಜನರಿಗೆ ಗಬ್ಬು ವಾಸನೆಯಿಂದ ಮುಕ್ತಿ ನೀಡಿದ್ದಾರೆ.
ಏನೇ ಆಗಲಿ ಪಬ್ಲಿಕ್ ನೆಕ್ಸ್ಟ್ ವರದಿಗೆ ಸ್ಪಂದಿಸಿದ ಪಾಲಿಕೆ ಅಧಿಕಾರಿಗಳಿಗೆ ನಮ್ಮ ಕಡೆಯಿಂದ ವಿಶೇಷ ಕೃತಜ್ಞತೆಗಳು.
Kshetra Samachara
30/03/2022 11:35 am