ಕುಂದಗೋಳ: ಗುಡಗೇರಿ ಬಸ್ ನಿಲ್ದಾಣದಿಂದ ಅಂಬ್ಕೇಡರ್ ಕಾಲೋನಿ ಸಂಪರ್ಕ ಕಲ್ಪಿಸುವ ರಸ್ತೆಯ ಬಾಕಿ ಉಳಿದ ಕಾಮಗಾರಿ ಪೂರ್ಣ ಕೈಗೊಳ್ಳುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಗುಡಗೇರಿ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಈಗಾಗಲೇ ಕಾಮಗಾರಿ ಪೂರ್ಣಗೊಂಡಿರುವ ರಸ್ತೆ ಹೊರತುಪಡಿಸಿ, ಗುಡಗೇರಿಯಲ್ಲಿ ಬಾಕಿ ಉಳಿದಿರುವ ಗುಡಗೇರಿ ಬಸ್ ನಿಲ್ದಾಣದಿಂದ ಅಂಬ್ಕೇಡರ್ ಕಾಲೋನಿ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಧೂಳುಮಯ ಆದ ಕಾರಣ, ಬೇಸಿಗೆಯಲ್ಲಿ ವಾಹನ ಸಂಚಾರಕ್ಕೆ ಹಾಗೂ ರಸ್ತೆ ಪಕ್ಕದ ನಿವಾಸಿಗಳ ಮನೆಗಳಿಗೆ ಧೂಳು ನುಗ್ಗುತ್ತಿದ್ದು, ಶಾಲಾ-ಕಾಲೇಜು ಮಕ್ಕಳ ಸಂಚಾರ ಕಷ್ಟವಾಗಿದೆ.
ಈ ಬಗ್ಗೆ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಬಾಕಿ ಉಳಿದಿರುವ ರಸ್ತೆ ಅಭಿವೃದ್ಧಿ ಪಡಿಸುವಂತೆ ಗುಡಗೇರಿ ಗ್ರಾಮಸ್ಥರು ಪಬ್ಲಿಕ್ ನೆಕ್ಸ್ಟ್ ಗೆ ವೀಡಿಯೋ ಕಳುಹಿಸಿ ಮನವಿ ಮಾಡಿದ್ದಾರೆ.
ಈ ಬಗ್ಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಗಮನಿಸಿ ರಸ್ತೆ ಅಭಿವೃದ್ಧಿ ಪಡಿಸಬೇಕಿದೆ.
Kshetra Samachara
18/03/2022 08:04 am