ಕುಂದಗೋಳ: ನಮಸ್ಕಾರಿ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳೇ.. ನೀವು ಕೊಂಕಣಕುರಹಟ್ಟಿ ಚಾಕಲಬ್ಬಿ ಮಾರ್ಗವಾಗಿ ಸಂಶಿಗೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ವಹಣೆ ಕಾಮಗಾರಿ ಶುರು ಮಾಡರೀ ಓಕೆ... ಆದ್ರೆ ಕಾಮಗಾರಿ ಕಳಪೆ ಯಾಕೆ ಮಾಡುತ್ತಿದ್ದೀರಿ?
ಹೌದು ರೀ... ಈ ಪ್ರಶ್ನೆಯನ್ನ ನಾವು ಕೇಳ್ತಿಲ್ಲ, ಸ್ವತಃ ಆ ರಸ್ತೆ ಸಂಚಾರಿಗಳೇ ಪಬ್ಲಿಕ್ ನೆಕ್ಸ್ಟ್‌ಗೆ ವಿಡಿಯೋ ಕಳುಹಿಸಿದ್ದಾರೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕೈಗೊಂಡ ರಸ್ತೆ ಕಾಮಗಾರಿಯಲ್ಲಿ ಕಳಪೆ ಆಗಿದೆ ಎಂದು ಆರೋಪಿಸಿದ್ದಾರೆ.
ಸದ್ಯ ನಡೆದಿರುವ ರಸ್ತೆ ಕಾಮಗಾರಿಯು ಕಳಪೆಯಾಗಿದ್ದು, ನಿರ್ವಹಣೆ ಹಂತದಲ್ಲೇ ಡಾಂಬರ್ ಕಿತ್ತು ಬರುತ್ತಿದೆ. ದೊಡ್ಡ ದೊಡ್ಡ ತಗ್ಗು ಹೊರತುಪಡಿಸಿ ಸಣ್ಣ ಅತಿ ಸಣ್ಣ ತಗ್ಗು ಗುಂಡಿಗಳಿಗೆ ನೀವು ಡಾಂಬರ್ ಹಾಕುವುದನ್ನೇ ಕೈ ಬಿಟ್ಟಿದ್ದೀರಿ ಅಂತೆ. ಈ ಕಾರಣ ಕಾಮಗಾರಿ ಮುಗಿದ ನಾಲ್ಕೇ ದಿನದಲ್ಲಿ ರಸ್ತೆ ಹಾಳಾಗುತ್ತೆ ಎಂದು ಜನ ಹೇಳುತ್ತಿದ್ದಾರೆ.
ಒಟ್ಟಾರೆ ನೋಡ್ರಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳೇ, ಸರ್ಕಾರದ ಅನುದಾನ ಸರಿಯಾಗಿ ಬಳಕೆ ಮಾಡಿ ಜನರಿಗೆ ಉತ್ತಮ ರಸ್ತೆ ಕಲ್ಪಿಸಿ ಕೊಡ್ರಿ ಅನ್ನೋದು ಪಬ್ಲಿಕ್ ನೆಕ್ಸ್ಟ್ ಕಳಕಳಿ.
Kshetra Samachara
22/02/2022 11:04 pm