ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪಬ್ಲಿಕ್ ನೆಕ್ಸ್ಟ್ ಬಿಗ್ ಇಂಪ್ಯಾಕ್ಟ್; ಬಿಡ್ನಾಳ ರುದ್ರಭೂಮಿಗೆ ಶಾಸಕರ ಭೇಟಿ

ಇದು ಪಬ್ಲಿಕ್ ನೆಕ್ಸ್ಟ್ ಬಿಗ್ ಇಂಪ್ಯಾಕ್ಟ್....

ಹುಬ್ಬಳ್ಳಿ: ಕಸ ಕಂಟಿ ಬೆಳೆದು ಬಿಡ್ನಾಳ ರುದ್ರಭೂಮಿಯು ಕಾಡಿನಂತಾಗಿತ್ತು. ಇದರಿಂದಾಗಿ ಜನರು ಶವವನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋಗಬೇಕಾದರೆ ಭಯ ಬೀಳುವಂತಾಗಿತ್ತು. ಈ ಬಗ್ಗೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ವರದಿಯನ್ನು ಬಿತ್ತರಿಸಿತ್ತು. ವರದಿಯನ್ನು ನೋಡಿದ ಕೂಡಲೇ ಶಾಸಕ ಪ್ರಸಾದ ಅಬ್ಬಯ್ಯ ಪಾಲಿಕೆ ಅಧಿಕಾರಿಗಳು ಭೇಟಿ ನೀಡಿ ಸ್ವಚ್ಛತಾ ಕಾರ್ಯಕ್ಕೆ ಮುಂದಾಗಿದ್ದಾರೆ.

ಬಿಡ್ನಾಳದ ರುದ್ರಭೂಮಿ ಅವ್ಯವಸ್ಥೆ ಬಗ್ಗೆ ಎಷ್ಟೊ ಬಾರಿ ಪಾಲಿಕೆ ಅಧಿಕಾರಿಗಳಿಗೆ ಜನರು ತಿಳಿಸಿದ್ದರು. ಆದರೆ ಅಧಿಕಾರಿಗಳು ಇದಕ್ಕೆ ಕ್ಯಾರೆ ಎನ್ನುತ್ತಿರಲಿಲ್ಲ. ಈ ಬಗ್ಗೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ವರದಿ ಮಾಡಿದ ಕೂಡಲೆ ಶಾಸಕ ಅಬ್ಬಯ್ಯ ಹಾಗೂ ಪಾಲಿಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಅಭಿವೃದ್ಧಿಗಾಗಿ ಸುಮಾರು 1.75 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ.

ಆದಷ್ಟು ಬೇಗ ಬಿಡ್ನಾಳ ರುದ್ರಭೂಮಿ ಅಭಿವೃದ್ಧಿ ಮಾಡಿ ಜನರಿಗೆ ಅನುಕೂಲ ಮಾಡಿಕೊಡಬೇಕಾಗಿದೆ. ಹೀಗೆ ಅವ್ಯವಸ್ಥೆ ಬಗ್ಗೆ ಎಚ್ಚರಿಸಿ, ಅಭಿವೃದ್ಧಿ ಕಾರ್ಯಗಳನ್ನು ಮಾಡಿಸಲು ನಿಮ್ಮ ಪಬ್ಲಿಕ್‌ ನೆಕ್ಸ್ಟ್‌ ಸದಾ ನಿಮ್ಮೊಂದಿಗಿರುತ್ತದೆ.

ಈರಣ್ಣ ವಾಲಿಕಾರ,

ಪಬ್ಲಿಕ್ ನೆಕ್ಸ್ಟ್

Edited By : Manjunath H D
Kshetra Samachara

Kshetra Samachara

07/02/2022 06:30 pm

Cinque Terre

71.21 K

Cinque Terre

5

ಸಂಬಂಧಿತ ಸುದ್ದಿ