ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಳ್ನಾವರ :ವಿದ್ಯಾನಗರದ ಬಡಾವಣೆಯ ಗೋಳು ಕೇಳುವರ್ಯಾರು

ಅಳ್ನಾವರ: ಇಲ್ಲಿ ಕುಡಿಯುವ ನೀರಿಗಾಗಿ ಬರವಿದೆ.ಒಳಚರಂಡಿ ವ್ಯವಸ್ಥೆ ಇಲ್ಲದೆ ಗಬ್ಬು ನಾಥದಿಂದ ಪ್ರತಿ ದಿನ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಇದೆ.ರಸ್ತೆ ಇದ್ದು ಇಲ್ಲಾದಂತಾಗಿ ಓಡಾಡುವುದು ಕಷ್ಟವಾಗಿದೆ.ಇಲ್ಲಿನ ಪಾರ್ಕ್ ಅಂತೂ ಅತ್ಯದ್ಭುತ.

ಹವ್ದು ಇದು ಅಳ್ನಾವರ ಪಟ್ಟಣದ 18ನೆ ಬಡಾವಣೆ ವಿದ್ಯಾನಗರ ದ ವಿಹಂಗಮ ನೋಟ.ಒಂಬತ್ತು ನೂರು ಆಸು ಪಾಸು ಜನಸಂಖ್ಯೆ ಹೊಂದಿದ ವಿದ್ಯಾನಗರ ಬಡಾವಣೆಯ ನಿತ್ಯದ ಗೋಳು ಕೇಳುವಾರ್ಯರು ಇಲ್ಲದಂತಾಗಿದೆ.

ಪ್ರತಿ ಮನೆಗೂ ನಲ್ಲಿಯ ವ್ಯವಸ್ಥೆ ಇದ್ದರು,ನೀರು ಬರುವ ಸೂಚನೆ ಇರದು.ಕುಡಿಯುವ ನೀರಿಗಾಗಿ ಚಿಕ್ಕ ಟ್ಯಾಂಕೊಂದನ್ನ ನಿರ್ಮಾಣ ಮಾಡಲಾಗಿದೆ,ಆದರೆ ಅದಕ್ಕೆ ನಲ್ಲಿಗಳೇ ಇಲ್ಲ.ಕಟ್ಟಿಗೆ,ಬಟ್ಟೆ ತುರುಕಿ ನೀರು ಸೋರುವುದನ್ನ ನಿಲ್ಲಿಸಬೇಕು.ಇದರಿಂದ ಸಂಗ್ರಹವಾದ ನೀರು ಉಪಯೋಗಕ್ಕೆ ಬಾರದೆ ಪೋಲಾಗಿ ಹೋಗುತ್ತಿದೆ.

ಸರಿಯಾದ ಒಳಚರಂಡಿ ವ್ಯವಸ್ಥೆ ಇಲ್ಲದೆ ನೀರು ಮುಂದೆ ಸಾಗದೆ ನಿಂತಲ್ಲಿಯೇ ನಿಂತು ಕೆಟ್ಟ ವಾಸನೆಯಿಂದ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಒಂದು ದಿನದ ಸಾವಲ್ಲ,ಪ್ರತಿ ದಿನ ಇದೆ ಗೋಳು.ಕೇಳುವಾರ್ಯರು ಆ ಭಗವಂತನಿಗೆ ಗೊತ್ತು.

ಮಕ್ಕಳು ಆಟವಾಡಲು, ಸಾರ್ವಜನಿಕರಿಗೆ ವಾಯು ವಿಹಾರ ಮಾಡಲು,ಪ್ರತಿಯೊಬ್ಬರಿಗೂ ಅನುಕೂಲವಾಗಲೆಂದು ಪಾರ್ಕ್ ಒಂದನ್ನ ಇಲ್ಲಿ ನಿರ್ಮಾಣ ಮಾಡಲಾಗಿದೆ.ಅದು ಹೆಸರಿಗಷ್ಟೇ ಪಾರ್ಕ್.ಕಸ ಕಂಟಿ ಗಳೆಲ್ಲ ಬೆಳೆದು ದಟ್ಟ ಕಾನನದ ಹಾಗೆ ಗೋಚರಿಸುತ್ತಿದೆ.ಅಲ್ಲಿ ಆಟ ವಾಡುವುದಲ್ಲ ನಡೆದಾಡಲು ಸಹ ಕಷ್ಟವಾಗಿದೆ.

ಕಸ ವಿಲೇವಾರಿ ವಾಹನ ಸರಿಯಾದ ಸಮಯಕ್ಕೆ ಬರದೆ ಕಸವೆಲ್ಲ ರಸ್ತೆ ಪಾಲಾಗುತ್ತಿದೆ.ಪಟ್ಟಣ ಪಂಚಾಯಿತಿ ಯವರಿಗೆ ಕೇಳಿದರೆ ಸಿಬ್ಬಂದಿ ಕೊರತೆ ಇದೆ ಎನ್ನುತ್ತಾರೆ.

ಇಲ್ಲಿಂದ ಚುನಾಯಿತಗೊಂಡ ಪ್ರತಿನಿಧಿ ಇತ್ತ ಕಡೆ ಮುಖ ಮಾಡಲು ಯಾಕೋ ಮುನಿಸಿಕೊಂಡಂತಿದೆ. ಸ್ಥಳೀಯರ ಗೋಳು ಕೇಳಲು ಅವರಿಗೆ ಸಮಯ ಸಿಗದೇನೋ.

ಇನ್ನಾದರೂ ಇತ್ತ ಕಡೆ ಗಮನ ಹರಿಸಿ ಇಲ್ಲಿನ ನರಕಯಾತನೆಗೆ ಮುಕ್ತಿ ದೊರಕಿಸಿಕೊಡಬೇಕಾಗಿದೆ.

-ಮಹಾಂತೇಶ ಪಠಾಣಿ ಪಬ್ಲಿಕ್ ನೆಕ್ಸ್ಟ್ಅಳ್ನಾವರ.

Edited By : Shivu K
Kshetra Samachara

Kshetra Samachara

21/01/2022 03:13 pm

Cinque Terre

37.32 K

Cinque Terre

0

ಸಂಬಂಧಿತ ಸುದ್ದಿ