ಹುಬ್ಬಳ್ಳಿ: ನಮ್ಮ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಎಡವಟ್ಟುಗಳ ಮೇಲೆ ಎಡವಟ್ಟು ಮಾಡ್ತೇತಿ ನೋಡ್ರಿ... ತಮ್ಮಲ್ಲಿ ಆಗಬೇಕಾದ ಕಾಮಗಾರಿಯನ್ನ ನೀಟ್ ಆಗಿ ಫಾಸ್ಟ್ ಆಗಿ ಮಾಡ್ಕೊತ್ತಾರ... ಆದರ ಜನರ ಕೆಲಸ ಮಾತ್ರ ತಮಗ ತಿಳದಾಗ ಮಾಡ್ತಾರ ನೋಡ್ರಿ....
ಖರೇನ ರೀ...ನಮ್ಮ ಮಹಾನಗರ ಪಾಲಿಕೆ ಮುಂದ ರಸ್ತೆಯನ್ನ ಅದೆಷ್ಟು ತಾಬುಡ್ ತುಬುಡ್ ಮುಗಸಿದ್ರಪಾ ಅಂದ್ರ ಎರಡು ದಿನದಾಗ ಕೆಲಸ ಮುಗೀತು. ಆದ್ರ ವಾಣಿಜ್ಯ ನಗರಿಯಲ್ಲಿನ ರಸ್ತೆ ಮಾತ್ರ ವರ್ಷಗಳ ಕಾಲ ಆಮೆಗತಿ ಒಳಗ ನಡೆಯಾಕತ್ತೇತಿ.... ಜನರು ಆ ಟ್ಯಾಕ್ಸ್ ಈ ಟ್ಯಾಕ್ಸ್ ಎಂದು ಪಾಲಿಕೆಗೆ ಕಟ್ಟತಾರ. ಆದ್ರೆ ಅವರಿಗೆ ಸೌಲಭ್ಯಗಳು ಲಗೂನ ಮುಟ್ಟಂಗೇ ಇಲ್ಲ... ನಗರದಾಗಿನ ಬಹುತೇಕ ರಸ್ತೆಗಳ ತುಂಬ ಎಲ್ಲಿ ನೋಡ್ತೀರಿ ಅಲ್ಲಿ ತಗ್ಗು-ಗುಂಡಿ ಕಾಣತಾವು. ಆದರ ಪಾಲಿಕೆ ಮುಂದಿನ ರಸ್ತೆ ಮಾತ್ರ ಪಳ ಪಳ ಲಕ ಲಕ ಹೊಳಿತೇತಿ. ಹಂಗಾಗಿ ಇದನ ನೋಡಿ ಮಂದಿ ಸಿಟ್ಟಾಗ್ಯಾರ.
ಒಟ್ನ್ಯಾಗ ನಮ್ಮ ಹುಬ್ಬಳ್ಳಿ ಧಾರವಾಡ ರಸ್ತೆಗಳು ಹದಗೆಟ್ಟರೂ ಸಹಿತ ಪಾಲಿಕೆ ಅಧಿಕಾರಿಗಳು ಅದನ್ನ ನೋಡಲಾರದ ತಮ್ಮ ವ್ಯಾಪ್ತಿಯಲ್ಲಿ ಬರುವಂತ ಪಾಲಿಕೆ ಆವರಣದಾಗ ಸುಗಮ ರಸ್ತೆ ಮಾಡಿಕೊಂಡು ಸಾರ್ವಜನಿಕರ ಆಕ್ರೋಶಕ್ಕೆ ಗುರಿ ಆಗ್ಯಾರ.
ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
Kshetra Samachara
17/01/2022 12:39 pm