ಲಕ್ಷ್ಮೇಶ್ವರ: ಪಟ್ಟಣದ ಪಾದಗಟ್ಟಿಯಿಂದ ಹಳೆ ಬಸ್ ನಿಲ್ದಾಣದವರೆಗೂ ನಡೆದಿರುವ ಚರಂಡಿ ಕಾಮಗಾರಿಯನ್ನು ಜಿಲ್ಲಾ ನಗರಾಭಿವೃದ್ಧಿ ಕೋಶದ ಪರಿಶೀಲನಾ ಅಧಿಕಾರಿಗಳ ತಂಡ ಆಗಮಿಸಿ ಕಾಮಗಾರಿಯ ಗುಣಮಟ್ಟ ಪರಿಶೀಲನೆ ನಡೆಸಿತು.
ರಸ್ತೆಯ ಎರಡು ಬದಿಗಳಲ್ಲಿ ನಿರ್ಮಿಸಲಾಗುವ ಚರಂಡಿ ಕಾಮಗಾರಿ ಒಂದು ಬದಿಯಲ್ಲಿ ಮುಕ್ತಾಯದ ಹಂತದಲ್ಲಿದ್ದು, ಕಾಮಗಾರಿ ವೀಕ್ಷಿಸಿದರು. ಜಿಲ್ಲಾ ನಗರಾಭಿವೃದ್ಧಿ ಕೋಶದ ಕಾರ್ಯನಿರ್ವಾಹಕ ಅಭಿಯಂತರ ಎಸ್.ಬಿ.ಮರಿಗೌಡ್ರ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಶ್ಯಾಮಲಾ ಸಿಬ್ಬಂದಿ ತಾಂತ್ರಿಕ ಪರಿಣಿತರು ತಂಡದಲ್ಲಿದ್ದು ಪರಿಶೀಲನೆ ಮಾಡಿದರು.
ಪುರಸಭೆ ಸಹಾಯಕ ಅಭಿಯಂತರ ವಿ.ಪಿ.ಕಾಟೇವಾಲೆ ಕಾಮಗಾರಿಯ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಿದರು.ಕೆಲವೊಂದು ಸಣ್ಣಪುಟ್ಟ ದೋಷಗಳನ್ನು ಕುರಿತು ಸಾರ್ವಜನಿಕರು ಅಧಿಕಾರಿಗಳಿಗೆ ಹೇಳಿದಾಗ ಅದನ್ನು ಕೊಡಲೇ ಸರಿಪಡಿಸುವಂತೆ ಗುತ್ತಿಗೆದಾರರಿಗೆ ತಿಳಿಸಲಾಯಿತು.
ಎರಡನೇ ಬದಿ ಕಾಮಗಾರಿ ಇಂದಿನಿಂದ ಪುರಸಭೆ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ ಮಾಹಿತಿ ನೀಡಿ ಪುರಸಭೆಯ ಅನುಧಾನದಲ್ಲಿ ಪಾದಗಟ್ಟಿಯಿಂದ ಹಳೆ ಬಸ್ ನಿಲ್ದಾಣದ ರಸ್ತೆಯವರೆಗೆ ಎರಡು ಬದಿಗಳಲ್ಲಿ ಪಕ್ಕಾ ಚರಂಡಿ ನಿರ್ಮಾಣಕ್ಕೆ ಕಾಮಗಾರಿ ಪ್ರಾರಂಭವಾಗಿದ್ದು ಒಂದು ಬದಿಯಲ್ಲಿ ಕಾಮಗಾರಿ ಮುಗಿದಿದೆ. ಅದನ್ನು ಜಿಲ್ಲಾ ನಗರಾಭಿವೃದ್ಧಿ ಕೋಶ ಎಂಜಿನಿಯರ್ ಗಳ ತಂಡ ಆಗಮಿಸಿ ಪರಿಶೀಲನೆಯನ್ನು ಕೈಗೊಂಡಿದ್ದಾರೆ.
Kshetra Samachara
13/01/2022 01:45 pm