ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಮೋದಿ ದೀರ್ಘಾಯುಷ್ಯಕ್ಕಾಗಿ ಮೃತ್ಯುಂಜಯ ಹೋಮ

ಕುಂದಗೋಳ : ಭಾರತೀಯ ಜನತಾ ಪಾರ್ಟಿ ಗ್ರಾಮಾಂತರ ಜಿಲ್ಲೆಯ ಮಹಿಳಾ ಮೋರ್ಚಾ ವತಿಯಿಂದ ಇಂದು ಕುಂದಗೋಳದ ಪಟ್ಟಣದ ಶಂಭೋಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಧಾನಿ ಮೋದಿ ಹೆಸರಲ್ಲಿ ಮೃತ್ಯುಂಜಯ ಹೋಮ ಮಾಡಲಾಯಿತು.

ಹೌದು ! ಪಂಜಾಬಿನಲ್ಲಿ ನಡೆದ ಘಟನೆಗೆ ಸಂಬಂಧಪಟ್ಟಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೆಸರಿನಲ್ಲಿ ಮೃತ್ಯುಂಜಯ ಹೋಮವನ್ನು ಜಿಲ್ಲಾ ಮಹಿಳಾ ಮೋರ್ಚಾ ವತಿಯಿಂದ ನೇರವೇರಿಸಿ ಅವರ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥನೆ ಮಾಡಲಾಯಿತು.

ಈ ಹೋಮ ಕಾರ್ಯಕ್ರಮವನ್ನು ಹನುಮಂತಪ್ಪ ಭಟ್ಟ ಜೋಶಿ, ಶಂಭುಲಿಂಗ ದೇವಾಲಯ ಅರ್ಚಕರಾದ ವಿಠ್ಠಲ ಹಂಪಿಹೋಳಿ ಯಶಸ್ಸಿಗಾಗಿ ನೆರೆವೇರಿಸಿಕೊಟ್ಟರು. ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಬಸವರಾಜ ಕುಂದಗೋಳಮಠ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಚೈತ್ರಾ ಶಿರೂರು, ಪ.ಪಂ ಅಧ್ಯಕ್ಷ ಸದಸ್ಯರು ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

07/01/2022 04:27 pm

Cinque Terre

13.1 K

Cinque Terre

4

ಸಂಬಂಧಿತ ಸುದ್ದಿ