ವರದಿಃ ಬಿ.ನಂದೀಶ
ಅಣ್ಣಿಗೇರಿ : ರೀ ಪುರಸಭೆಯ ಅಧಿಕಾರಿಗಳೇ ಎಲ್ಲಿದ್ದೀರಿ, ಜನರ ಸಮಸ್ಯೆಗಳತ್ತನೂ ಸ್ವಲ್ಪ ಗಮನ ಕೊಡ್ರಿ, ನಿಮ್ಮ ಕಚೇರಿ ಎದುರ್ಗಡೆನೇ ಇರೋ ಗಟಾರು ಒಳಗ ಹೊಲಸು ನೀರು ನಿಂತು ಗಬ್ಬು ನಾಥ ಬರಾಕತ್ತೈತ್ರಿ, ಎಷ್ಟ ಸಮಸ್ಯೆ ಅಯ್ತಿ ಅನ್ನೋದನ್ನ ಜನರ ದ್ವನಿಯಾಗಿ ನಾವ ಹೇಳ್ತಿವಿ ಕೇಳ್ರಿ.
ಹೌದ್ರಿ ದಿನದ 24 ತಾಸು ಸೊಳ್ಳೆ, ಗಬ್ಬು ನಾಥ ಬರೋದ್ರಿಂದ ಜನಕ್ಕ ಸಾಕ ಸಾಕಾಗಿ ಹೋಗೇತ್ರಿ, ಇಲ್ಲಿ ವಾಸ ಮಾಡು ಮನೆಯಾಗ ಸಣ್ಣ ಸಣ್ಣ ಹುಡುಗರು ಅದಾವ, ಕೊಳಚೆಯಿಂದ 15 ದಿನ ದವಾಖಾನೆಗ ಇದ್ದ ಬಂದಾರ ಸಾಹೇಬರ, ನೀವು ಒಳಗ ಆಫೀಸಿನ್ಯಾಗ ಫ್ಯಾನ್ ಬುಡಕ ಕೂತಿರಿ. ಅಲ್ಲಿ ನಿಮಗೆ ವಾಸ್ನೆ ಬರ್ತಾ ಇಲ್ಲ. ಅಲ್ರೀ ಸಾಹೇಬರೇ ನೀವು ಊರ ಸ್ವಚ್ಛ ಮಾಡೋದು ಬೇಡ, ನಿಮ್ಮ ಆಫೀಸಿನ ಎದುರಿಗೆ ಇರುವ ಗಟಾರರ ಸ್ವಚ್ಛ ಮಾಡ್ರಿ ಕೊಡ್ರಿ, ಯಾಕಂದ್ರೆ ದಿನ ನಿಮ್ಮ ಆಫೀಸಿಗೆ ನೂರಾರು ಜನ ಬರ್ತಾರ ಗಬ್ಬು ನಾಥ ಬರುವುದಕ್ಕ ಇಲ್ಲಿಗೆ ಬಾರೋ ಜನರಿಗೂ ಸಾಂಕ್ರಮಿಕ ರೋಗದ ಭಯ ಚಾಲು ಆಗೇತ್ರಿ.
ನಿಮ್ಮ ಆಫೀಸಿನ ಮುಂದಿರುವ ಅಂಗಡಿಕಾರರು, ಅಲ್ಲಿ ವಾಸ ಮಾಡೋ ಜನ ಎಷ್ಟು ಸಲ ನಿಮ್ಮ ಆಫೀಸಿಗೆ ಬಂದ ಹೋದ್ರ್ ಏನೋ ಕೆಲಸ ಆಗುತ್ತಿಲ ಸಾಹೇಬ್ರ, ಇದೆಲ್ಲಾ ಹೋಗ್ಲಿ ಬಿಡ್ರಿ ಸಾಹೇಬ್ರೆ ನಿಮ್ಮ ಸಿಬ್ಬಂದಿ ಪೌಡರ್ ಸಹಿತ ಹಾಕತಿಲ್ಲ ಅಂತ್ರಿ, ಆಫೀಸಿನ ಮುಂದಿರುವ ಗಟಾರ ಸ್ವಚ ಮಾಡಕ್ ಆಗಲಿಲ್ಲ, ಇನ್ನ ಊರಿನ ಸ್ವಚ್ಛ ಏನು ಮಾಡ್ತಾರ ಇವರ, ಹಿಂಗಂತ ಅಲ್ಲಿ ಜನ ಮಾತಾಡಕತ್ತಾರಿ, ಏನು ಹೇಳುತ್ತೀರಿ ಸಾಹೇಬ್ರ ನೀವು ಇದಕ್ಕ. ಆದೋಗ್ಲಿ ಜನ ಏನ್ ಹೇಳ್ತಾರಾ ನೀವ ಕೇಳ್ರಿ.
Kshetra Samachara
02/01/2022 10:29 pm