ಕುಂದಗೋಳ : ತಾಲೂಕಿನ ಬೃಹತ್ ಹೋಬಳಿ ಗ್ರಾಮ ಸಂಶಿ ಹಾಗೂ ಸುತ್ತ 26 ಹಳ್ಳಿಗಳನ್ನು ಒಳಗೊಂಡ ಉಪತಹಸೀಲ್ದಾರ ಕಚೇರಿಯೊಂದು ಕಳೆದ ಹಲವಾರು ವರ್ಷಗಳಿಂದ ಈ ರೀತಿ ಕತ್ತಲೆ ಕೋಣೆಯಂತಹ ಕೊಠಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದೆ.
ಸ್ವಾಮಿ 26 ಹಳ್ಳಿ ಜನರಿಗೆ ಅಗತ್ಯವಾದ ಜಾತಿ ಆದಾಯ, ಜನನ ಮರಣ ಪ್ರಮಾಣ ಪತ್ರ, ಸಂಧ್ಯಾ ಸುರಕ್ಷಾ, ಪಿಂಚಣಿ ಹೀಗೆ ನಾನಾ ಕೆಲಸಕ್ಕೆ ಅಗತ್ಯವಾದ ಬಹುಮುಖ್ಯ ಸರ್ಕಾರಿ ಕಚೇರಿಯೊಂದು ಬಾಡಿಗೆ ಆಶ್ರಿತ ಕಚೇರಿಯಲ್ಲಿ ಮೂಲ ಸೌಕರ್ಯಗಳೇ ಇಲ್ಲದೆ ಮಳೆಗಾಲದಲ್ಲಿ ಸೊರುತ್ತ ಈ ರೀತಿ ಪರದೆ ಕಟ್ಟಿಕೊಂಡು ಕರ್ತವ್ಯ ನಿರ್ವಹಿಸುತ್ತಿದೆ.
ಪರಿಸ್ಥಿತಿ ಹೀಗಿದ್ದರೂ ನಿರ್ಮಿತಿ ಕೇಂದ್ರ ನೂತನವಾಗಿ ನಿರ್ಮಿಸಿದ ಸುಸಜ್ಜಿತ ಉಪತಹಸೀಲ್ದಾರ್ ಕಚೇರಿ ಉದ್ಘಾಟನೆ ಆಗದೇ ಇರುವುದು ಜನತೆ ಕಚೇರಿ ಕೆಲಸಕ್ಕೆ ನಿತ್ಯವೂ ಪ್ರಯಾಸ ತಂದೊಡ್ಡಿದೆ.
ಇದೀಗ ಬಾಡಿಗೆ ಆಶ್ರಿತ ಉಪತಹಸೀಲ್ದಾರ್ ಕಚೇರಿ ನೂತನ ಕಟ್ಟಡಕ್ಕೆ ಸ್ಥಳಾಂತರವಾಗದೆ ಇರುವ ಕಾರಣ ನಿರ್ಮಿತಿ ಕೇಂದ್ರ ನಿರ್ಮಿಸಿದ ಉಪತಹಸೀಲ್ದಾರ್ ಕಟ್ಟಡದ ಕಿಟಿಕಿ ಗ್ಲಾಸು ಒಡೆದು, ಕಟ್ಟಡದ ಸುತ್ತ ಕಸ ಬೆಳೆದು ನಿರ್ವಹಣೆ ಇಲ್ಲದೆ ಹಾಳಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಗಮನಿಸಿ ಕಚೇರಿಗೆ ಉದ್ಘಾಟನೆ ಭಾಗ್ಯ ಕಲ್ಪಿಸಬೇಕಿದೆ.
ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್
Kshetra Samachara
01/01/2022 04:11 pm