ಕುಂದಗೋಳ : ಪಟ್ಟಣದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅನ್ನಪೂರ್ಣ ಸಂಗಳದ ಕುಂದಗೋಳ ತಾಲೂಕಿನ ನೆಲಗುಡ್ಡ ಗ್ರಾಮದ ಗುರುಶಿದ್ದಪ್ಪ ಗಾಣಿಗೇರ ಮನೆಗೆ ಭೇಟಿ ನೀಡಿ ತಾಯಿಯನ್ನು ಕಳೆದುಕೊಂಡು ಅನಾಥವಾದ ಎರೆಡು ವರ್ಷದ ಮಗುವಿನ ಆರೈಕೆಗೆ ಕುಟುಂಬವನ್ನು ಸಮಾಲೋಚನೆ ನಡೆಸಿದರು.
ತಾಯಿ ಕಳೆದುಕೊಂಡು ಕಲಿಕೆ ಅರ್ಧಕ್ಕೆ ಬಿಟ್ಟ ಹೆಣ್ಣು ಮಗುವಿಗೆ ವಸತಿ ವ್ಯವಸ್ಥೆ ಹಾಗೂ ಶಿಕ್ಷಣ ವ್ಯವಸ್ಥೆಯ ಬಗ್ಗೆ ಹಾಗೂ ಇಲಾಖೆಯಲ್ಲಿರುವ ಸೌಲಭ್ಯಗಳ ಬಗ್ಗೆ ತಿಳಿಸಿ ಹೇಳಿದರು. ನಂತರ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ದಾಖಲಾತಿಗಳನ್ನು ಪರಿಶೀಲಿಸಿ ಫಲಾನುಭವಿಗಳಿಗೆ ವಿತರಿಸಿದ ಮೊಟ್ಟೆ ಹಾಗೂ ಆಹಾರ ಸಾಮಗ್ರಿಗಳ ಬಗ್ಗೆ ವಿಚಾರಣೆ ಮಾಡಿದರು.
Kshetra Samachara
16/12/2021 01:09 pm