ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಬಸ್ ನಿಲ್ದಾಣದ ಸ್ವಚ್ಛತೆಗೆ ಪುರಸಭೆ ವತಿಯಿಂದ ಪತ್ರ

ನವಲಗುಂದ ಪಟ್ಟಣದ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಂದ ಮೂತ್ರ ಮಾಡಲಾಗುತ್ತಿದೆ ಮತ್ತು ಅಸ್ವಚ್ಛತೆಯಿಂದ ಕೂಡಿದೆ. ಸ್ವಚ್ಛ ಭಾರತ್ ನಿಯಮಾವಳಿ ಅನುಸಾರವಾಗಿ ಸ್ಥಳವನ್ನು ಕೂಡಲೇ ಸ್ವಚ್ಛಗೊಳಿಸುವಂತೆ ಆಗ್ರಹಿಸಿ ನವಲಗುಂದ ಪುರಸಭೆ ವತಿಯಿಂದ ಬಸ್ ನಿಲ್ದಾಣದ ಘಟಕ ವ್ಯವಸ್ಥಾಪಕರಿಗೆ ಕೋರಿಕೆ ಪತ್ರ ನೀಡಲಾಗಿದೆ.

ನವಲಗುಂದ ಪಟ್ಟಣದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಂದ ಮೂತ್ರ ಮಾಡಲಾಗುತ್ತಿದೆ ಮತ್ತು ಅಸ್ವಚ್ಛತೆಯಿಂದ ಕೂಡಿದೆ ಎಂದು ಈ ಹಿಂದೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ಕೂಡ ವರದಿ ಬಿತ್ತರಿಸಿತ್ತು. ಈಗ ಸ್ವಚ್ಛತೆ ಕಾಪಾಡಲು ಪುರಸಭೆ ಮುಖ್ಯಾಧಿಕಾರಿ ವೀರಪ್ಪ ಹಸಬಿ ಅವರಿಗೆ ಮೌಖಿಕ ದೂರು ಸಹ ಬಂದಿವೆ. ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿಗಳು ಬಸ್ ನಿಲ್ದಾಣದ ವ್ಯವಸ್ಥಾಪಕರಿಗೆ ಕೋರಿಕೆ ಪತ್ರವನ್ನು ನೀಡಿದ್ದು, ಬಸ್ ನಿಲ್ದಾಣವನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

09/12/2021 02:45 pm

Cinque Terre

10.12 K

Cinque Terre

0

ಸಂಬಂಧಿತ ಸುದ್ದಿ