ಕುಂದಗೋಳ : ಪಟ್ಟಣದ ಗ್ರಾಮೀಣ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಸರಿಯಾದ ವ್ಯವಸ್ಥೆಯಿಲ್ಲ. ಬಸ್ ನಿಲ್ದಾಣಕ್ಕೆ ಬರುವ ಸಾರ್ವಜನಿಕರಿಗೆ ದುರ್ವಾಸನೆ, ನಾಯಿ ಕಾಟ ಅತಿಯಾಗಿದೆ. ಸಾಲದಕ್ಕೆ ಪಡ್ಡೆ ಹುಡುಗರು ಕೋತಿಗಳಂತೆ ಬಸ್ ನಿಲ್ದಾಣದ ಕಾಂಪೌಂಡ್ ಏರಿ ಕೂರುತ್ತಿದ್ದಾರೆ.
ನಿತ್ಯ ಕುಂದಗೋಳ ಪಟ್ಟಣದಿಂದ ಗ್ರಾಮೀಣ ನಗರ ಸಾರಿಗೆ ಬಸ್ ಪ್ರಯಾಣ ಬೆಳೆಸುವ ಬಸ್ ನಿಲ್ದಾಣದಲ್ಲಿ ಜಾಗವಿದ್ದರೂ ಈ ಕಾಲೇಜು ಹುಡುಗರು ತಮ್ಮ ಸುರಕ್ಷತೆಯನ್ನು ಮರೆತು ಬಸ್ ನಿಲ್ದಾಣದ ಕಾಂಪೌಂಡ್ ಏರಿ ಕೂರುತ್ತಾರೆ.
ಈ ಬಗ್ಗೆ ತಾಕೀತು ಮಾಡಲು ಯಾರು ಇಲ್ಲದಂತ್ತಾಗಿದೆ. ಮುಖ್ಯವಾಗಿ ಈ ಬಸ್ ನಿಲ್ದಾಣದಲ್ಲಿ ಸಿಸಿ ಕ್ಯಾಮೆರಾ ಸಹ ಇಲ್ಲದ್ದರಿಂದ ರಾತ್ರಿ ವೇಳೆ ಪ್ರಯಾಣ ಬೆಳೆಸುವವರಿಗೆ ಸುರಕ್ಷತೆ ಮರಚಿಕೆಯಾಗಿದೆ.
ಇನ್ನು ನಿಲ್ದಾಣದಲ್ಲಿರುವ ಮಹಿಳಾ ವಿಶ್ರಾಂತಿ ಕೊಠಡಿ ಧೂಳು ಹಿಡಿದಿದ್ದು ಮಹಿಳೆಯರಿಗೆ ಕೂರಲು ಉಪಯುಕ್ತವಾಗಿಲ್ಲ ವಿದ್ಯುತ್ ಸೌಲಭ್ಯ ಸಹ ದೋಷಪೂರಿತವಾಗಿದೆ, ಈ ಬಗ್ಗೆ ಸಂಬಂಧಪಟ್ಟ ಸಾರಿಗೆ ಅಧಿಕಾರಿಗಳು ಗಮನಿಸುವಂತೆ ಪ್ರಯಾಣಿಕರು ಒತ್ತಾಯಿಸಿದ್ದಾರೆ.
Kshetra Samachara
04/12/2021 04:01 pm