ನವಲಗುಂದ : ನೀಲಮ್ಮನ ಕೆರೆಯ ನೀರನ್ನು ಈಗ ನವಲಗುಂದ ಪುರಸಭೆ ವತಿಯಿಂದ ಖಾಲಿ ಮಾಡಲಾಗುತ್ತಿದೆ. ಅದು ಕೂಡ ಜನರ ಆರೋಗ್ಯದ ಹಿತದೃಷ್ಟಿಯಿಂದ. ಹೀಗಾಗಿ ಈಗಾಗಲೇ ಕೆರೆಯ ಮುಂಭಾಗ ಫಲಕವನ್ನು ಸಹ ಅಳವಡಿಸಲಾಗಿದೆ.
ಹೌದು ಹಲವು ವರ್ಷಗಳಿಂದ ಈ ಕೆರೆಯ ನೀರನ್ನು ಬದಲಾಯಿಸಲಾಗಿಲ್ಲ. ಆದ್ದರಿಂದ ನೀರು ಕಲುಷಿತವಾಗಿರುವ ಸಾಧ್ಯತೆ ಸಹ ಹೆಚ್ಚಾಗಿಯೇ ಇದೆ. ಹೀಗಾಗಿ ನೀರನ್ನು ಹೊರತೆಗೆಯಲು ಪುರಸಭೆ ಅಧಿಕಾರಿಗಳು ಮುಂದಾಗಿದ್ದಾರೆ. ಈ ಕೆರೆಯ ನೀರನ್ನು ಜನರು ಈಗಲೂ ಸಹ ಕುಡಿಯುತ್ತಾರೆ. ಹೀಗಾಗಿ ಯಾರು ಸಹ ನೀರನ್ನು ಕುಡಿಯಬಾರದು ಎಂದು ಕೆರೆಯ ಹೊರಗಡೆ ಫಲಕವನ್ನು ಸಹ ಅಳವಡಿಸಲಾಗಿದೆ.
Kshetra Samachara
25/11/2021 05:22 pm