ನವಲಗುಂದ : ಅಕಾಲಿಕ ಮಳೆಯೂ ಈಗ ಗ್ರಾಮೀಣ ಭಾಗದ ಜನರ ನೆಮ್ಮದಿಯನ್ನು ಕಸಿದುಕೊಂಡಿದೆ. ಮಳೆಯಿಂದ ಮನೆ ಹಾನಿ, ಬೆಳೆ ಹಾನಿ ಅಷ್ಟೇ ಅಲ್ಲದೇ ಹದಗೆಟ್ಟ ರಸ್ತೆಯ ಸಂಚಾರ ಅನಿವಾರ್ಯವಾಗಿದೆ.
ಇದು ನವಲಗುಂದ ತಾಲ್ಲೂಕಿನ ಯಮನೂರ ಗ್ರಾಮ ಪಂಚಾಯತ್ ಗೆ ಒಳಪಡುವ ಅರೆಕುರಹಟ್ಟಿ ಗ್ರಾಮದ ಪೂಜಾರ ಓಣಿಯಲ್ಲಿನ ರಸ್ತೆಯ ದುಸ್ಥಿತಿ, ಕೆಸರು ಗದ್ದೆಯಂತಾದ ಈ ರಸ್ತೆ ಕಳೆದ ಒಂದೂವರೆ ವರ್ಷಗಳಿಂದ ಇದೆ ಪರಿಸ್ಥಿತಿಯಲ್ಲಿದೆಯಂತೆ, ಈ ರಸ್ತೆಗೆ ಅಂಟಿಕೊಂಡೆ 80 ಮನೆಗಳಿವೆಯಂತೆ, ಹೆಚ್ಚಾಗಿ ಗ್ರಾಮದಲ್ಲಿನ ಶಾಲೆಗೆ ಹೋಗುವ ಮಕ್ಕಳಿಂದ ಹಿಡಿದು, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳುವ ವೃದ್ಧರು, ಗರ್ಭಿಣಿಯರು ಇದೆ ರಸ್ತೆಯಲ್ಲಿ ಸಂಚಾರ ಮಾಡುತ್ತಾರೆ. ಈ ಸಮಸ್ಯೆ ಬಗ್ಗೆ ಗ್ರಾಮಸ್ಥರು ಯಮನೂರ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ತಿಳಿಸಿದರೆ ಇದುವರೆಗೂ ದುರಸ್ಥಿ ಕಾರ್ಯಕ್ಕೆ ಮುಂದಾಗಿಲ್ಲ ಎಂಬುದು, ಸ್ಥಳೀಯರ ಅಳಲಾಗಿದೆ.
ಇನ್ನು ಜನಪ್ರತಿನಿದಿನಗಳ ಮನೆಯ ರಸ್ತೆಗಳು ಇರುವಷ್ಟು ಸುಸರ್ಜಿತ, ಗ್ರಾಮೀಣ ಭಾಗದ ರಸ್ತೆಗಳಲ್ಲಿ ಒಂದು ಪರ್ಸೆಂಟ್ ಆದ್ರೂ ಇದಿದ್ರೆ, ಜನರು ನೆಮ್ಮದಿಯಿಂದ ಇರ್ತಿದ್ರೇನೋ ಅನಿಸುತ್ತೆ, ಒಟ್ಟಾರೆಯಾಗಿ ಇದು ಸಚಿವರ ಕ್ಷೇತ್ರ, ಇಲ್ಲಿನ ಸಮಸ್ಯೆಗಳಿಗೆ ಸಚಿವರು ಕೂಡಲೇ ಸ್ಪಂದಿಸಿ, ಸ್ಥಳಕ್ಕೆ ಅಧಿಕಾರಿಗಳನ್ನು ಕಳುಹಿಸಿ, ಪರಿಶೀಲಿಸಿ, ರಸ್ತೆ ದುರಸ್ತಿಗೆ ಮುಂದಾಗಬೇಕಿದೆ.
ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ
Kshetra Samachara
23/11/2021 01:54 pm