ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕಸದಲ್ಲಿಯೇ ತುಂಬಿ ಹೋದ ರಸ್ತೆ: ಇಲ್ಲಿ ಸಂಚರಿಸುವುದೇ ನರಕಯಾತನೆ...!

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯನ್ನು ಸ್ಮಾರ್ಟ್ ಮಾಡಬೇಕು ಸಾಕಷ್ಟು ಯೋಜನೆ ಜಾರಿಗೊಳಿಸಿದರು. ಯಾವುದೇ ಕಾರಣಕ್ಕೂ ಸ್ಮಾರ್ಟ್ ಆಗಲ್ಲ. ಇಲ್ಲಿನ ಅವ್ಯವಸ್ಥೆ ನೋಡಿದರೇ ನಿಜಕ್ಕೂ ಇದು ಸ್ಮಾರ್ಟ್ ಸಿಟಿಗೆ ಆಯ್ಕೆಯಾಗಿರುವ ಹುಬ್ಬಳ್ಳಿನಾ ಅಂತ ಬೇಸರ ಮೂಡುವುದಂತೂ ಸತ್ಯ.

ಹುಬ್ಬಳ್ಳಿಯ ಶಿರೂರ್ ಪಾರ್ಕಿನಲ್ಲಿ ಎಲ್ಲೆಂದರಲ್ಲಿ ಚಲ್ಲಿರುವ ಕಸದ ರಾಶಿಯನ್ನು ನೋಡಿದರೇ ನಿಜಕ್ಕೂ ಮಹಾನಗರ ಪಾಲಿಕೆ ವಿರುದ್ಧ ಹಿಡಿಶಾಪ ಹಾಕುವುದಂತೂ ಖಂಡಿತ. ರಸ್ತೆಯಲ್ಲಿಯೇ ಚಲ್ಲಿರುವ ಅಂಗಡಿಗಳ ತ್ಯಾಜ್ಯ, ಬೇಕಾಬಿಟ್ಟಿಯಾಗಿ ಎಸೆದಿರುವ ಪ್ಲಾಸ್ಟಿಕ್ ಚೀಲಗಳು, ಎಸೆದ ಕಸದ ಮೇಲೆ ಸುರಿದಿರುವ ದ್ರವ ತ್ಯಾಜ್ಯ ಇದರಿಂದ ಪರಿಸರವೇ ಹಾಳಾಗಿದ್ದು, ಮುಗು ಮುಚ್ಚಿಕೊಂಡು ಹೋಗುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಇಂತಹದೊಂದು ಪರಿಸ್ಥಿತಿಗೆ ಸಾಕ್ಷಿಯಾಗಿರುವುದು ಹುಬ್ಬಳ್ಳಿ ಶಿರೂರ ಪಾರ್ಕ್ ನ ಅಯ್ಯಪ್ಪ ದೇಗುಲಕ್ಕೆ ಹೋಗುವ ರಸ್ತೆ. ಈ ರಸ್ತೆಯಲ್ಲಿ ಸುಮಾರು ಭಕ್ತಾದಿಗಳು ಓಡಾಡುತ್ತಾರೆ. ಅಲ್ಲದೆ ಇಲ್ಲಿನ ಮಾಂಸದ ಅಂಗಡಿಗಳ ತ್ಯಾಜ್ಯವನ್ನು ರಸ್ತೆ ಮಧ್ಯದಲ್ಲಿ ಹಾಕುವುದರಿಂದ ದುರ್ನಾತ ಎದ್ದು, ಜನರು ಆಕ್ರೋಶಗೊಂಡಿದ್ದಾರೆ.

ಇನ್ನೂ ಮಹಾನಗರ ಪಾಲಿಕೆಯವರು ಸರಿಯಾದ ರೀತಿಯಲ್ಲಿ ತ್ಯಾಜ್ಯ ವಿಲೇವಾರಿ ಹಾಗೂ ಸಂಗ್ರಹ ಮಾಡದೇ ಇರುವುದರಿಂದ ಸಾಕಷ್ಟು ಸಮಸ್ಯೆಗಳು ತಲೆದೋರಿವೆ. ಇನ್ನೂ ಇಲ್ಲಿನ ಜನರಲ್ಲಿ ಸಾಕಷ್ಟು ರೋಗಿಗಳ ಭೀತಿ ಆವರಿಸಿದ್ದು, ಕೂಡಲೇ ಮಹಾನಗರ ಪಾಲಿಕೆ ಆಯುಕ್ತರು ಸೂಕ್ತ ಕ್ರಮಗಳನ್ನು ಜರುಗಿಸಬೇಕಿದೆ.

Edited By : Shivu K
Kshetra Samachara

Kshetra Samachara

18/11/2021 10:29 am

Cinque Terre

27.92 K

Cinque Terre

12

ಸಂಬಂಧಿತ ಸುದ್ದಿ