ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಉಸ್ತುವಾರಿ ಮಂತ್ರಿ ಕ್ಷೇತ್ರದ ಜನ ಬಸ್ಸಿಗಾಗಿ ಸುಸ್ತೋ ಸುಸ್ತು

ಅಣ್ಣಿಗೇರಿ: ತಾಲೂಕಿನ ಬಸಾಪುರ ಗ್ರಾಮಕ್ಕೆ ಅಸಮರ್ಪಕ ಬಸ್ ಸೌಲಭ್ಯ ಇರುವುದನ್ನ ಕಂಡು ಗ್ರಾಮಸ್ಥರು, ವಿದ್ಯಾರ್ಥಿಗಳ ಸಮೇತ ಬುಧವಾರ ರಸ್ತೆಯಲ್ಲಿ ವಾಹನ ತಡೆ ನಡೆಸಿದ್ದಾರೆ.

ಬಸಾಪೂರ ಗ್ರಾಮದಿಂದ ಸುಮಾರು 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಅಣ್ಣಿಗೇರಿ ಹಾಗೂ ನವಲಗುಂದ ಪಟ್ಟಣಕ್ಕೆ ಹೋಗುತ್ತಾರೆ. ಈ ವಿದ್ಯಾರ್ಥಿಗಳಿಗೆ ದಿನನಿತ್ಯ ಹೋಗಿ ಬರಲು ಸರಿಯಾಗಿ ಬಸ್ ವ್ಯವಸ್ಥೆ ಇಲ್ಲ. ತಡವಾಗಿ ಶಾಲೆ- ಕಾಲೇಜುಗಳಿಗೆ ಹೋದರೆ ಶಾಲೆಯ ಒಳಗಡೆ ಕರೆದುಕೊಳ್ಳುವದಿಲ್ಲ ಎನ್ನುವುದು ವಿದ್ಯಾರ್ಥಿಗಳ ಕೂಗಾಗಿದೆ. ಇದನ್ನು ಕಂಡ ಗ್ರಾಮಸ್ಥರು ಬುಧವಾರ ಮುಂಜಾನೆ ಏಕಾಏಕಿ ರಸ್ತೆಗಿಳಿದು ಪ್ರತಿಭಟನೆ ಮಾಡಿ ಪ್ರಯಾಣಿಕರು ಪರದಾಡುವಂತೆ ಮಾಡಿದರು. ಸಮರ್ಪಕ ಬಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ತಮ್ಮ ಅಳಲನ್ನು ಪಬ್ಲಿಕ್ ನೆಕ್ಸ್ಟ್ ಮೂಲಕ ತೋಡಿಕೊಂಡಿದ್ದಾರೆ.

Edited By : Shivu K
Kshetra Samachara

Kshetra Samachara

17/11/2021 12:10 pm

Cinque Terre

40.45 K

Cinque Terre

1

ಸಂಬಂಧಿತ ಸುದ್ದಿ