ನವಲಗುಂದ : ಇದು ನವಲಗುಂದ ಪಟ್ಟಣದ ಪಶು ಆಸ್ಪತ್ರೆಯ ಆವರಣ, ಆಸ್ಪತ್ರೆಯ ಮುಖ್ಯ ದ್ವಾರದಿಂದ ಆಸ್ಪತ್ರೆಯವರೆಗೆ ಎಲ್ಲಾ ಸ್ವಚ್ಛವಾಗಿಯೇ ಇದೆ. ಅದೇ ನೀವು ಕೊಂಚ ಅತ್ತ ಇತ್ತ ಕಣ್ಣು ಹಾಯಿಸಿದರೆ ನಿಮ್ಮ ಕಣ್ಣಿಗೆ ಬೀಳೋದು ಕೇವಲ ಕುಡಿದು ಎಸೆದ ಮದ್ಯಪಾನದ ಬಾಟಲ್ ಗಳು ಮತ್ತು ಕಸದ ರಾಶಿ ಮಾತ್ರ...
ಹೌದು ಆಸ್ಪತ್ರೆ ಅಧಿಕಾರಿಗಳು ಎಷ್ಟೆಲ್ಲಾ ಕ್ರಮ ಕೈಗೊಂಡರು ಪುಂಡರು ಮಾತ್ರ ಈ ಆವರಣದ ಒಳಗೆ ಬಂದು ಮದ್ಯ ಸೇವನೆ ಮಾಡೋದನ್ನ ಮಾತ್ರ ಬಿಡ್ತಿಲ್ಲ, ಅಷ್ಟೇ ಅಲ್ಲದೆ ಮೂತ್ರ ಕೂಡ ಮತ್ತೆ ಮುಂದುವರೆದಿದೆ. ಆಸ್ಪತ್ರೆಯ ಹಿಂಬದಿ ಹೋದ್ರೆ ಕುಡಿದು ಎಸೆದ ಪ್ಲಾಸ್ಟಿಕ್ ಗ್ಲಾಸ್ ಮತ್ತು ಮದ್ಯದ ಟೆಟ್ರಾ ಪ್ಯಾಕೆಟ್, ಬಾಟಲ್ ಗಳೇ ಕಾಣುತ್ತವೆ. ಈ ಬಗ್ಗೆ ಅಧಿಕಾರಿಗಳು ಕಟ್ಟು ನಿಟ್ಟಿನ ಕ್ರಮ ಕೈಗೊಂಡು ಒಬ್ಬ ಸಿಬ್ಬಂದಿಯನ್ನಾದರೂ ನೇಮಿಸಿ, ಸ್ವಚ್ಛತೆ ಕಾಪಾಡುವ ಕೆಲಸ ಮಾಡಬೇಕಿದೆ.
ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ...
Kshetra Samachara
14/11/2021 02:34 pm