ನವಲಗುಂದ : ಜನನಿಬಿಡ ಪ್ರದೇಶದಲ್ಲಿ ಇಂತಹ ಕೊಳಚೆ ವಾತಾವರಣ ಮತ್ತು ಈ ರೀತಿಯ ವೈರಿಂಗ್ ಬೋರ್ಡ್ ನಿಂದಾಗಿ ಈಗ ಇಲ್ಲಿ ಆತಂಕಕ್ಕೆ ಈಡುಮಾಡುವ ವಾತಾವರಣ ಸೃಷ್ಟಿಯಾಗಿದೆ. ಈ ಬಗ್ಗೆ ಇಲ್ಲಿದೆ ಒಂದು ವರದಿ.
ಸಮಸ್ಯೆ ಚಿಕ್ಕದಿದ್ದಾಗಲೇ ಅದನ್ನು ಬಗೆ ಹರಿಸಬೇಕು. ಇಲ್ಲವಾದರೆ ಮುಂದೆ ನುಂಗಲಾರದ ತುತ್ತಾಗಿ ಪರಿಣಮಿಸುತ್ತೆ, ಈಗ ಪಟ್ಟಣದ ನೀಲಮ್ಮನ ಕೆರೆಯ ಮುಂಭಾಗ ಆಗಿರೋದು ಇದೆ ಪರಿಸ್ಥಿತಿ, ಶುದ್ಧ ಕುಡಿಯುವ ನೀರಿನ ಘಟಕದಿಂದ ಪೋಲಾಗುತ್ತಿರುವ ನೀರು ಹರಿದು ಚರಂಡಿ ಸೇರಲು ಸ್ಥಳವಿಲ್ಲದೆ. ಜನರು ಕೆರೆಗೆ ಹೋಗಲು ಸ್ಥಳವಿಲ್ಲದಂತೆ ಸಂಪೂರ್ಣ ನಿಂತು ಸಮಸ್ಯೆ ತಂದೊಡ್ಡಿದೆ.
ಇನ್ನು ನೀರು ನಿಂತು ಕೊಳಚೆಯಾಗಿ ಬದಲಾಗುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಕೂಡ ಹೆಚ್ಚಿದೆ. ಅಷ್ಟೇ ಅಲ್ಲದೆ ಇದೇ ಸ್ಥಳದಲ್ಲಿ ಬೀದಿ ದೀಪದ ವೈರಿಂಗ್ ಬೋರ್ಡ್ ನೆಲಕ್ಕೆ ತಾಗಿದ ಸ್ಥಿತಿಯಲ್ಲಿದೆ. ಇಷ್ಟೆಲ್ಲಾ ಸಮಸ್ಯೆ ಒಂದೇ ಸ್ಥಳದಲ್ಲಿ ಇರೋದು ಮತ್ತು ಇದು ಜನದಟ್ಟನೆಯ ಸ್ಥಳವಾಗಿರೋದರಿಂದ ಅವಘಡ ಸಂಭವಿಸುವ ಮುನ್ನಾ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಎಚ್ಚೆತ್ತು ಸಮಸ್ಯೆ ಬಗೆ ಹರಿಸಬೇಕಿದೆ.
ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ.
Kshetra Samachara
14/11/2021 01:38 pm