ಲಕ್ಷ್ಮೇಶ್ವರ: ಶಾಲಾ ಕಾಲೇಜುಗಳು ಪ್ರಾರಂಭಗೊಂಡು ಒಂದು ತಿಂಗಳು ಗತಿಸಿದರು ಬಸ್ಸಿಗಾಗಿ ದಿನನಿತ್ಯವೂ ವಿದ್ಯಾರ್ಥಿಗಳು ಕಾದು ಕಾದು ಸುಸ್ತಾಗಿರುವ ಘಟನೆಗಳು ದಿನನಿತ್ಯವು ನಡೆಯುತ್ತಿವೆ. ಆದರೆ ಅಧಿಕಾರಿಗಳು ಮಾತ್ರ ಕಣ್ಣುಮುಚ್ಚಿಕೊಂಡು ಕುಳಿತುಕೊಂಡಿದ್ದಾರೆ.
ಹೌದು.. ಲಕ್ಷ್ಮೇಶ್ವರ ತಾಲೂಕಿನ ಸುತ್ತಮುತ್ತಲಿನ ಹಳ್ಳಿಗಳಿಂದ ಹರಸಾಹಸ ಮಾಡಿ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಲಕ್ಷ್ಮೇಶ್ವರ ತಲುಪುತ್ತಾರೆ. ಆದರೆ ಲಕ್ಷ್ಮೇಶ್ವರದಿಂದ ಮುಳಗುಂದ ಗದಗ ಹೋಗಲು ಕೇವಲ 2 ರಿಂದ 3 ಬಸ್ ಗಳು ಮಾತ್ರ ಇವೆ. ನಿತ್ಯ 300 ರಿಂದ 350 ವಿದ್ಯಾರ್ಥಿಗಳು ಕಾಲೇಜಿಗೆ ಹೋಗುತ್ತಾರೆ. ಆದರೇ ಇಲ್ಲಿ ನೋಡಿದರೆ ಬರಿ ಎರಡು ಮೂರು ಬಸ್ ಗಳಿವೆ ಬಿಟ್ಟರೆ ಮತ್ತೇ ಯಾವುದೇ ಬಸ್ ವ್ಯವಸ್ಥೆ ಇಲ್ಲದೇ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೋಗಲು ಪರದಾಡುವಂತಾಗಿದೆ.
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬಸ್ ವ್ಯವಸ್ಥೆ ಕಲ್ಪಿಸುವರೇ ಕಾದುನೋಡಬೇಕಿದೆ.
Kshetra Samachara
11/11/2021 10:20 pm