ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಖಾಸಗಿ ವಾಹನ ಬೇಕಿಲ್ಲ, ಬಂತಲ್ಲ ನಮ್ಮೂರ ಮಾರ್ಗವಾಗಿ ಸಾರಿಗೆ ಬಸ್

ಕುಂದಗೋಳ: ತಾಲೂಕಿನ ಗುಡೇನಕಟ್ಟಿ ಗ್ರಾಮಕ್ಕೆ ಆಗಮಿಸಿದ ಸಾರಿಗೆ ಬಸ್'ಗೆ ಮದುವಣಗಿತ್ತಿಯಂತೆ ಶೃಂಗಾರ ಮಾಡಿ, ಹೂಗಳಿಂದ ಅಲಂಕಾರ ಮಾಡಿ, ಪೂಜೆ ಸಲ್ಲಿಸಿ, ಆರತಿ ಬೆಳಗಿ ಬರೋಬ್ಬರಿ ನಾಲ್ಕು ಗ್ರಾಮಗಳ ಸಾರ್ವಜನಿಕರು ತಮ್ಮೂರಿಗೆ ಬಸ್ಸನ್ನು ಬರಮಾಡಿಕೊಂಡರು.

ಹೌದು ! ಯಾಕೆ ? ಸಾರಿಗೆ ಬಸ್'ಗೆ ಈ ಪಾಟಿ ಅಲಂಕಾರ ಅಂದ್ ಕೊಂಡ್ರಾ ? ಕಳೆದ ನಾಲ್ಕೈದು ವರ್ಷಗಳಿಂದ ಕುಂದಗೋಳ ತಾಲೂಕಿನ ಗುಡೇನಕಟ್ಟಿ, ನಾಗರಹಳ್ಳಿ, ಮಂಟೂರು, ಬಂಡಿವಾಡ, ಶಿರಗುಪ್ಪಿ, ನಲವಡಿ ಮಾರ್ಗವಾಗಿ ಇರದ ಬಸ್ ಸಂಚಾರ ಇಂದಿನಿಂದ ಆರಂಭವಾಗಿದ್ದು, ಗದಗ ಮತ್ತು ನವಲಗುಂದಕ್ಕೆ ಸಾರಿಗೆ ಬಸ್'ಗಳು ಪ್ರಯಾಣ ಬೆಳೆಸಿವೆ.

ಈ ಬಸ್ ಸಂಚಾರದಿಂದ ಗುಡೇನಕಟ್ಟಿ, ನಾಗರಹಳ್ಳಿ ಮಾರ್ಗವಾಗಿ ಮುಂದಿನ 5 ಹಳ್ಳಿ ಪ್ರಯಾಣಿಕರ ಜೊತೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಈ ಕಾರಣ ಗುಡೇನಕಟ್ಟಿ ಗ್ರಾಮಸ್ಥರು ಇಂದು ಸಾರಿಗೆ ಬಸ್'ಗೆ ಪೂಜೆ ಸಲ್ಲಿಸಿ ಆರತಿ ಬೆಳಗಿ ತಮ್ಮ ಗ್ರಾಮದ ಮಾರ್ಗವಾಗಿ ಬರಮಾಡಿಕೊಂಡರು.

ಇನ್ನೂ ಗ್ರಾಮಕ್ಕೆ ಸರ್ಕಾರ ಹಾಗೂ ಅಧಿಕಾರಿಗಳು ಬಸ್ ಸೌಲಭ್ಯ ಕಲ್ಪಿಸಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಖಾಸಗಿ ವಾಹನ ಬಳಸದೇ, ಸಂಪೂರ್ಣ ಸಾರಿಗೆ ಬಸ್'ನಲ್ಲೇ ಪ್ರಯಾಣಿಸುವ ನಿರ್ಧಾರ ಸಹ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸಾರಿಗೆ ನಿರ್ದೇಶಕ ಅಶೋಕ್ ಮಳಗಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನಪ್ಪ ಸೊರಟೂರ, ಸದಸ್ಯ ಬಸವರಾಜ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

Edited By : Shivu K
Kshetra Samachara

Kshetra Samachara

09/11/2021 08:09 am

Cinque Terre

42.42 K

Cinque Terre

1

ಸಂಬಂಧಿತ ಸುದ್ದಿ