ಕುಂದಗೋಳ : ಪಟ್ಟಣದಲ್ಲಿ ಒಂದು ಭವ್ಯ ಸ್ಮಾರಕ ಪಡ್ಡೆ ಹುಡುಗರ ಕ್ರಿಕೆಟ್ ತಾಣವಾದ್ರೇ, ಇನ್ನೊಂದೆಡೆ ಚಿಕ್ಕ ಮಕ್ಕಳ ಹಾಗೂ ಸಾರ್ವಜನಿಕ ಉದ್ಯಾನವನ ಹಾಳಾಗಿ ತನ್ನನ್ನು ಅಭಿವೃದ್ಧಿ ಪಡಿಸುವಂತೆ ಪಟ್ಟಣ ಪಂಚಾಯಿತಿ ಅಧಿಕಾರಿಗಳನ್ನು ಒತ್ತಾಯಿಸುತ್ತಿದೆ.
ಇದೇ ಹುಬ್ಬಳ್ಳಿ ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಯ ಪಕ್ಕದ ಕುಂದಗೋಳ ಪಟ್ಟಣದ ಸವಾಯಿ ಗಂಧರ್ವರ ಸ್ಮಾರಕ ಭವನದಲ್ಲಿ, ಈ ಪಡ್ಡೆ ಹುಡುಗರು ಕ್ರಿಕೆಟ್ ಆಟ ಆರಂಭಿಸಿದ್ದು ಸ್ಮಾರಕಕ್ಕೆ ಧಕ್ಕೆ ತರುವ ಹಂತದಲ್ಲಿದ್ದಾರೆ.
ನಿತ್ಯ ಸಾಯಂಕಾಲ ಸ್ಮಾರಕ ಭವನದ ಮುಂಭಾಗದಲ್ಲಿ ಆಟ ಆಡುವ ಈ ಯುವಕರು ಎಲ್ಲಿ ಸ್ಮಾರಕ ಭವನದ ಗ್ಲಾಸು ಒಡೆಯುತ್ತಾರೆ ಎಂಬ ಭಯ ಸ್ಥಳೀಯರನ್ನು ಕಾಡುತ್ತಿದ್ದು, ಭವನದ ಸುತ್ತಲೂ ಅನೈರ್ಮಲ್ಯ ದುರ್ವಾಸನೆ ಹರಡಿದೆ.
ಇನ್ನೂ ಗಾಳಿ ಮರೆಮ್ಮದೇವಿ ದೇವಸ್ಥಾನದ ಪಕ್ಕದ ಉದ್ಯಾನವನ ಕಳೆದ ಎರಡು ವರ್ಷಗಳಿಂದ ಹಾಳಾದ ಪರಿಣಾಮ ಚಿಕ್ಕ ಮಕ್ಕಳು ಹಾಗೂ ಪಟ್ಟಣದ ನಾಗರಿಕರಿಗೆ ವಿಶ್ರಾಂತಿ ಕಳೆಯಲು ಸಣ್ಣ ಪುಟ್ಟ ಆಟವಾಡಲು ಇದ್ದ ಜಾಗವೊಂದು ಅವ್ಯವಸ್ಥೆ ಹಾದಿ ಹಿಡಿದಿದೆ. ಈ ಉದ್ಯಾನವನದಲ್ಲಿನ ಕೂರುವ ಆಸನಗಳು, ವ್ಯಾಯಾಮ ಮಾಡುವ ಉಪಕರಣಗಳು ಎಲ್ಲವೂ ಹಾಳಾಗುತ್ತಿದ್ದು ಜನ ಹೇಳೋ ಪೈಕಿ ಇಲ್ಲಿ ದುಶ್ಚಟ ಮಾಡುವವರು ಹೆಚ್ಚಾಗಿದ್ದಾರೆ.
ಈ ಬಗ್ಗೆ ಸಂಬಂಧಪಟ್ಟ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಗಮನಿಸಿ ಸವಾಯಿ ಗಂಧರ್ವರ ಸ್ಮಾರಕ ಭವನದ ಆಟಕ್ಕೆ ಗುಡ್ ಬೈ ಹೇಳಿ, ಈ ಗಾಳಿ ಮರೆಮ್ಮದೇವಿ ದೇವಸ್ಥಾನದ ಪಕ್ಕದ ಉದ್ಯಾನವನ ಅಭಿವೃದ್ಧಿ ಪಡಿಸಬೇಕಿದೆ.
-ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್
Kshetra Samachara
05/11/2021 01:15 pm